ನಿಂಗೆ ಮಾಟ ಮಾಡ್ಸಿದ್ದಾರೆ ಅದನ್ನು ತೆಗೀಬೇಕು ನಿನ್ನ ಬೆತ್ತಲೆ ಫೋಟೋ ಕೊಡು ಎಂದ ಕಳ್ಳ ಬಾಬಾ…..

ದೆಹಲಿ : ಕಳ್ಳ ಬಾಬಾನೊಬ್ಬ ಯುವತಿಗೆ ನಿಮ್ಮ ಮೇಲೆ ಯಾರೋ ಬಾನಾಮತಿ ಪ್ರಯೋಗ ಮಾಡಿದ್ದಾರೆ ಅದನ್ನು ತೆಗೆಯಬೇಕು. ನಿಮ್ಮ ನಗ್ನ ಫೋಟೋ ಕಳಿಸಿ ಎಂದಿದ್ದು, ಈ ಸಂಬಂಧ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ.

32 ವರ್ಷದ ಯುವತಿಯೊಬ್ಬಳು ಗ್ರಂಥಾಲಯದಲ್ಲಿ ಕೆಲಸ ಮಾಡಿಕೊಂಡಿದ್ದಳು. ಈಕೆಗೆ ಎಷ್ಟೇ ಕಡೆ ಸಂಬಂಧ ನೋಡಿದರೂ ಮದುವೆ ವಿಳಂಬವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಯುವತಿ ಪರಿಹಾರಕ್ಕಾಗಿ ಸಂಬಂಧಿಯೊಬ್ಬರ ಸಲಹೆಯಂತೆ ಬಾಬಾನ ಬಳಿ ಹೋಗಿದ್ದಳು. ಕೆಲ ದಿನಗಳ ಬಳಿಕ ನಂಬರೊಂದರಿಂದ ಕರೆ ಬಂದಿದ್ದು, ಕರೆ ಮಾಡಿದ ವ್ಯಕ್ತಿ ಆಕೆಯ ಮಾಹಿತಿ ಹಾಗೂ ಫೋಟೋ ಕೇಳಿದ್ದ. ಬಳಿಕ ಯುವತಿ ಆತನಿಗೆ ಫೋಟೋ ಸಹ ಕಳಿಸಿದ್ದಳು.

ಅದಾದ ಕೆಲ ದಿನಗಳ ಬಳಿಕ ಮತ್ತೆ ಆಕೆಗೆ ಕರೆ ಬಂದಿದ್ದು. ನಿನ್ನ ಮೇಲೆ ಯಾರೋ ಮಾಟ ಮಾಡಿಸಿದ್ದಾರೆ. ಅದನ್ನು ತೆಗೆಯಬೇಕು. ಆದ್ದರಿಂದ ನಿನ್ನ ನಗ್ನ ಫೋಟೋ ಕಳುಹಿಸುವಂತೆ ಹೇಳಿದ್ದಾನೆ. ಅಲ್ಲದೆ ಆತ ಸಹ ಯುವತಿಗೆ ನಗ್ನ ಫೋಟೋವೊಂದನ್ನು ಕಳುಹಿಸಿದ್ದ. ಇದೇ ವಿಚಾರವಾಗಿ ಇಬ್ಬರ ಮಧ್ಯೆ ಚರ್ಚೆ ನಡೆದು ಕೊನೆಗೆ ಈತ ಕಳ್ಳ ಬಬಾ ಎಂದು ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ. ಸದ್ಯ ಕಳ್ಳ ಬಾಬಾನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com