ಪ್ರಜಾ ಪ್ರಭುತ್ವ ದೇಶದಲ್ಲಿ ಪೇಶ್ವೆಗಳ ಆಡಳಿತ ನಡೆಯುತ್ತಿದೆ : ದೇವನೂರ ಮಹಾದೇವ

ದಾವಣಗೆರೆ : ರಾಷ್ಟ್ರಪಿತ ಗಾಂಧಿ ಹುಟ್ಟಿದ ನಾಡಲ್ಲಿ ಗೋಡ್ಸೆಗಳ್ ಹಿರೋ ಆಗಿ ಮೆರೆಯುತ್ತಿದ್ದಾರೆ. ದೇಶದಲ್ಲಿರುವುದು ಪ್ರಜಾ ಪ್ರಭುತ್ವವಲ್ಲ ಪೇಶ್ವೆಗಳ ಆಡಳಿತ ಎಂದು ಸಾಹಿತಿ ದೇವನೂರ ಮಹಾದೇವ ಹೇಳಿದ್ದಾರೆ.

ದಾವಣಗೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಹಾಗೂ ಕಾಂಗ್ರೆಸ್‌ ಪಕ್ಷಯ ನಾಯಕರು ವಚನ ಭ್ರಷ್ಟರು.ಮೋದಿ ತಾವು ನೀಡಿದ ಭರವಸೆಯಂತೆ ದೇಶದಲ್ಲಿ ಉದ್ಯೋಗ ಸೃಷ್ಠಿ ಮಾಡಿಲ್ಲ. ಕಾಂಗ್ರೆಸ್‌ನವರೂ ಇದಕ್ಕೆ ಹೊರತಾಗಿಲ್ಲ. ಬರವಸೆ ನೀಡುವುದೊಂದೇ ಅವರ ಕೆಲಸ. ಆದರೆ ಅದನ್ನುಕಾರ್ಯಗತಗೊಳಿಸುವುದಿಲ್ಲ ಎಂದಿದ್ದಾರೆ.

ಇಂತಹ ವಿಶಮ ಪರಿಸ್ಥಿತಿಯಲ್ಲಿ ರಾಜಕೀಯ ಶಕ್ತಿಯ ಅಗತ್ಯವಿದೆ ಎಂದಿರುವ ಅವರು, ಒಂದೊಂದು ಪಕ್ಷಗಳು ಒಂದೊಂದು ಸಿದ್ಧಾಂತಕ್ಕೆ ಒಳಪಟ್ಟಿವೆ. ಅವುಗಳಿಂದ ಪ್ರಾದೇಶಿಕ ನೆಲೆಯಲ್ಲಿ ನ್ಯಾಯ ನಿರೀಕ್ಷಿಸುವುದು ಕಷ್ಟ ಎಂದಿದ್ದಾರೆ.

Leave a Reply

Your email address will not be published.