ಶಿವಮೊಗ್ಗ : ಮಗಳ ಮೇಲೆ ಕಣ್ಣು ಹಾಕಿದವನಿಗೆ ರೊಚ್ಚಿಗೆದ್ದ ತಾಯಿ ಮಾಡಿದ್ದೇನು..?

ಶಿವಮೊಗ್ಗ : ನಗರದ ಹೊರವಲಯದ ಗೋವಿಂದಪುರದಲ್ಲಿ ವಾಸಿಸುತ್ತಿದ್ದ ಧನಲಕ್ಷ್ಮಿ ಎಂಬುವವರ ಮಗಳ ಮೇಲೆ ನಿತಿನ್ ಎಂಬ ಯುವಕ ಕಣ್ಣು ಹಾಕಿದ್ದ. ಆಕೆಯನ್ನು ಲವ್ ಮಾಡುತ್ತಿರುವುದಾಗಿ ತನ್ನ ಗೆಳೆಯರ ಎದುರು ಹೇಳಿಕೊಂಡು ತಿರುಗಾಡುತ್ತಿದ್ದ.

ಇದರಿಂದ ರೊಚ್ಚಿಗೆದ್ದ ಧನಲಕ್ಷ್ಮಿ ಪುಡಿ ರೌಡಿಗಳಿಗೆ ಸುಪಾರಿ ಕೊಟ್ಟು ನಿತಿನ್ ಮೇಲೆ ಹಲ್ಲೆ ಮಾಡಿಸಿದ್ದಾಳೆ. ಶಿವಮೊಗ್ಗ ನಗರದ ಹೊರವಲಯದ ಗೋವಿಂದಪುರ ಗ್ರಾಮದಲ್ಲಿ ನಡೆದ ಘಟನೆ.

ಪುಡಿ ರೌಡಿ ಸಂತು ಎಂಬಾತನನ್ನು ಬಿಟ್ಟು ನಿತಿನ್ ಮತ್ತು ಆತನ ಸ್ನೇಹಿತರ ಮೇಲೆ ಹಲ್ಲೆ ಮಾಡಿಸಿದ್ದಾಳೆ. ಘಟನೆಯಲ್ಲಿ ನಿತಿನ್ ಚೂರಿ ಇರಿತದಿಂದ ತೀವ್ರವಾಗಿ ಗಾಯಗೊಂಡಿದ್ದಾನೆ. ಈತನ ಸ್ನೇಹಿತರಾದ ರಾಜು, ಪ್ರಜ್ವಲ್, ನವೀನ್ ಎಂಬುವರೂ ಗಾಯಗೊಂಡಿದ್ದಾರೆ.

ನಾಲ್ಕೂ ಜನ ಗಾಯಾಳುಗಳು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಲ್ಲೆ ನಡೆಸಿದ ಪುಡಿ ರೌಡಿ ಕುಟ್ಟಿ ಮತ್ತು ಈತನ ಗೆಳೆಯರಾದ ನವೀನ್, ಪ್ರದೀಪ  ಸಂತು ಎಂಬುವರು ಪರಾರಿ ಆಗಿದ್ದಾರೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com