ಚಳಿ ಮಧ್ಯೆಯೂ ಹಾಸ್ಟೆಲ್‌ ನೌಕರರ ಪ್ರತಿಭಟನೆ : ಉಪವಾಸ ಸತ್ಯಾಗ್ರಹಕ್ಕೆ ತಿರುಗಿದ ಹೋರಾಟ

ಬೆಂಗಳೂರು : ಹಾಸ್ಟೆಲ್‌ ಹೊರಗುತ್ತಿಗೆ  ನೌಕರರ ಅನಿರ್ಧಿಷ್ಠಾವದಿ ಹೋರಾಟ ಮುಂದುವರಿದಿದ್ದು, ಇಂದಿನಿಂದ ಈ ಹೋರಾಟವು ಸರದಿ ಉಪವಾಸ ಸತ್ಯಾಗ್ರಹವಾಗಿ ಮಾರ್ಪಟ್ಟಿದೆ. ಸೋಮವಾರ 28 ಮಂದಿ ಹಾಸ್ಟೆಲ್‌ ನೌಕರರು ಉಪವಾಸ ಹೋರಾಟ ಕೈಗೊಂಡಿದ್ದು, ನಾಳೆಯಿಂದ ಮತ್ತಷ್ಟು ನೌಕರರು ಉಪವಾಸ ಕೂರಲಿದ್ದಾರೆ.

ಬೆಂಗಳೂರಿನಲ್ಲಿ ಹೆಚ್ಚಿದ ಚಳಿಯ ಮಧ್ಯೆಯೇ ಬೇಡಿಕೆ ಪೂರೈಸುವಂತೆ ಆಗ್ರಹಿಸಿ ಹಾಸ್ಟೆಲ್‌ ನೌಕರರು ಬೀದಿಗಿಳಿದಿದ್ದಾರೆ. ಹತ್ತಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದರೂ ರಾಜ್ಯ ಸರ್ಕಾರ ಸೇವಾ ಭದ್ರತೆ ನೀಡುತ್ತಿಲ್ಲ ಎಂದು ಆರೋಪಿಸಿರುವ ನೌಕರರು, ಸೇವಾ ಭದ್ರತೆ ಖಚಿತಪಡಿಸದ ಹೊರತು ಹೋರಾಟ ಕೈಬಿಡುವುದಿಲ್ಲ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com