ರೆಡ್ಡಿ ರಾಜಕೀಯ Re Entry ಗೆ ಹಿನ್ನೆಡೆ : ಬಳ್ಳಾರಿಗೆ ಕಾಲಿಡುವಂತಿಲ್ಲ ಅಂತು ಕೋರ್ಟ್‌

ಬೆಂಗಳೂರು : ಬಳ್ಳಾರಿಯಲ್ಲಿ ಗಣಿಧಣಿ ಜನಾರ್ಧನ ರೆಡ್ಡಿ ರಾಜಕೀಯಕ್ಕೆ ರೀ ಎಂಟ್ರಿ ಪಡೆಯಲು ಹಿನ್ನಡೆಯಾಗಿದ್ದು, ಬಳ್ಳಾರಿಯಿಂದ ಚುನಾವಣೆಗೆ ಸ್ಪರ್ಧಿಸಬೇಕೆಂಬ ಕನಸಿಗೆ ತಣ್ಣೀರೆರಚಿದಂತಾಗಿದೆ.

ವಿಧಾನಸಭಾ ಚುನಾವಣೆಗೆ ಇನ್ನೇನು ಕೇವಲ 3 ತಿಂಗಳು ಸಮಯವಿದ್ದು, ಬಳ್ಳಾರಿಯಿಂದ ಚುನಾವಣೆಗೆ ಸ್ಪರ್ಧಿಸಲು ಕನಸು ಹೊತ್ತಿದ್ದ ರೆಡ್ಡಿಗೆ ಕೋರ್ಟ್ ನಡೆಯಿಂದ ಅಸಮಾಧಾನವಾದಂತಾಗಿದೆ. ಜನಾರ್ಧನ ರೆಡ್ಡಿ ಜಾಮೀನು ಮಾರ್ಪಾಡು ಸಂಬಂಧ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಸುಪ್ರೀಂಕೋರ್ಟ್‌ ನಿರಾಕರಿಸಿದೆ. ಜೊತೆಗೆ ಷರತ್ತು ಬದ್ದ ಬದಲಾವಣೆಗೆ ಒಪ್ಪದ ನ್ಯಾಯಾಲಯ ಬಳ್ಳಾರಿಗೆ ಹೋಗುವಂತಿಲ್ಲ ಎಂದಿದೆ.

ಈ ಹಿಂದೆ ವಿಧಿಸಿದ್ದ ಷರತ್ತುಗಳ ಮಾರ್ಪಾಡು ಮಾಡಲು ನಿರಾಕರಿಸಿರುವ ಕೋರ್ಟ್‌ ಮೊದಲು ಚಾರ್ಜ್‌ ಶೀಟ್‌ ಸಲ್ಲಿಕೆಯಾಗಲಿ. ಅದಾದ ಬಳಿಕ ಜಾಮೀನು ಮಾರ್ಪಾಡಿನ ಬಗ್ಗೆ ತೀರ್ಮಾನ ಮಾಡುವುದಾಗಿ ಹೇಳಿದೆ.

Leave a Reply

Your email address will not be published.

Social Media Auto Publish Powered By : XYZScripts.com