ತೊಗಾಡಿಯಾ ಅವರಿಗೆ ತೊಂದರೆಯಾದ್ರೆ, ದೇಶದ ಜನ ತಕ್ಕ ಪಾಠ ಕಲಿಸ್ತಾರೆ : ಮುತಾಲಿಕ್

ಗದಗ : ವಿಶ್ವ ಹಿಂದೂ ಪರಿಷತ್ ಮುಖಂಡ ತೊಗಾಡಿಯಾ ಜೀವ ಬೆದರಿಕೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರಮೋದ್ ಮುತಾಲಿಕ್ ಹರಿಹಾಯ್ದಿದ್ದಾರೆ.   ‘ ನಿನ್ನೆ ಪ್ರವೀಣ್ ಭಾಯ್ ತೊಗಾಡಿಯಾ ಅವ್ರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ರಾಜಸ್ಥಾನ, ಗುಜರಾತ್ ಹಾಗೂ ಕೇಂದ್ರ ಸರ್ಕಾರ ತೊಗಾಡಿಯಾ ಅವ್ರನ್ನ ಮುಗಿಸಲು ತಂತ್ರ ಮಾಡ್ತಿದೆ.

‘ ನಿಮ್ಮಲ್ಲಿ ತಾಕತ್ತಿದ್ರೆ ದಾವೂದ್ ಇಬ್ರಾಹಿಂ, ಸಯಿದ್ ಅವ್ರನ್ನ ಎನ್ ಕೌಂಟರ್ ಮಾಡಿ. ತೊಗಾಡಿಯಾ ಅವರಿಗೇನಾದ್ರು ತೊಂದರೆಯಾದ್ರೆ ಮುಂದಿನ ಚುನಾವಣೆಯಲ್ಲಿ ದೇಶದ ಜನ ಪಾಠ ಕಲಿಸ್ತಾರೆ ‘ ಎಂದು ಗದಗನಲ್ಲಿ ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿದ್ದಾರೆ.

‘ ದೇಶದಲ್ಲಿ ಹಿಂದೂ ಧ್ವನಿ ಹತ್ತಿಕ್ಕುವ ಕುತಂತ್ರ ನಡೆಯುತ್ತಿದೆ. ನನಗೂ ಕೂಡ ಪಾಕಿಸ್ತಾನ ಹಾಗೂ ದುಬೈ ಹೆಸರು ಹೇಳಿಕೊಂಡು ಬೆದರಿಕೆ ಕರೆ ಬಂದಿದೆ. ಇಂಥ ಧಮಕಿಗೆ ನಾನೂ ಹೆದರುವವನಲ್ಲ. ಪಾಕ್, ದುಬೈನಲ್ಲಿ ಕೂತು ಆಟವಾಡಬೇಡಿ. ಹಿಂದುತ್ವದ ಧ್ವನಿ ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ ‘ ಎಂದು ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com