ಮೈಸೂರಿನಲ್ಲಿ ಮತ್ತೊಂದು Love Jihad..!? : ಮುಸ್ಲಿಂ ಯುವಕನೊಂದಿಗೆ ಹೋದ ಜೈನ್ ಯುವತಿ

ಇತ್ತೀಚೆಗಷ್ಟೇ ವರದಿಯಾಗಿದ್ದ ಲವ್ ಜಿಹಾದ್ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಮುಸ್ಲಿಂ ಯುವಕನೊಂದಿಗೆ ಹೋದ ಜೈನ್‌ ಯುವತಿಯ ಪೋಷಕರಿಂದ ಠಾಣೆ ಮುಂದೆ ಪರೇಡ್ ನಡೆಸಿದ್ದಾರೆ.

5 ದಿನಗಳ ಹಿಂದೆ ಯುವತಿ ಮುಸ್ಲಿಂ ಯುವಕನೊಂದಿಗೆ ಹೋಗಿದ್ದಾಳೆ. ಪೊಲೀಸರು ನಮ್ಮ ದೂರು ತೆಗೆದುಕೊಳ್ಳುತ್ತಿಲ್ಲ ಎಂದು ಯುವತಿಯ ಪೋಷಕರು ಆರೋಪಿಸಿದ್ದಾರೆ. ಆದರೆ ಮೂರು ದಿನಗಳ ಹಿಂದೆ ಮೈಸೂರಿನ ಎನ್‌.ಆರ್.ಠಾಣೆಯಲ್ಲಿ ಸ್ವ ಇಚ್ಛೆಯಿಂದ ಹೋಗಿರುವುದಾಗಿ ಯುವತಿ ಹೇಳಿಕೆ ನೀಡಿದ್ದಾಳೆ.

ಮೈಸೂರಿನ ದಿವಾನ್ಸ್ ರಸ್ತೆಯ ಜಯಂತಿ ಲಾಲ್‌ ಎಂಬುವರ ಪುತ್ರಿ ಪೂಜಾಕುಮಾರಿ ಮುಸ್ಲಿಂ ಯುವಕನೊಂದಿಗೆ ಹೋದ ಯುವತಿಯಾಗಿದ್ದಾಳೆ.
ಮಂಡಿಮೋಹಲ್ಲಾದ ಅಬ್ದುಲ್‌ ನಾಸೀರ್‌ ಎಂಬುವನ ಜೊತೆ ಪೂಜಾಕುಮಾರಿ ಹೋಗಿದ್ದಾಳೆ. ಪೂಜಾಕುಮಾರಿಗೆ 21 ವಯಸ್ಸು, ಅಬ್ದುಲ್‌ ನಾಸೀರ್‌ಗೆ 28 ವಯಸ್ಸು.

ನಾಲ್ಕು ದಿನಗಳಿಂದಲು ಯುವಕನೊಂದಿಗೆ ಹೋಗಿರುವ ಕುರಿತು ದೂರು ನೀಡಲು ಯುವತಿಯ ಪೊಷಕರು ಪರದಾಡುತ್ತಿದ್ದಾರೆ. ನನ್ನ ಮಗಳ ಮೇಲೆ ಒತ್ತಡ ಹಾಕಿ ಕರೆದುಕೊಂಡು ಹೋಗಿದ್ದಾರೆ.  ಈ ಬಗ್ಗೆ ದೂರು ನೀಡಲು ಹೋದ್ರೆ ಪೊಲೀಸರು ನಿಮ್ಮ ಮಗಳೆ ಅವನೊಂದಿಗೆ ಹೋಗಿದ್ದಾರೆ ಎನ್ನುತ್ತಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ನ್ಯಾಯಾಧೀಶರ ಮುಂದೆ ಸಮಸ್ಯೆ ಇತ್ಯಾರ್ಥ್ಯ ಮಾಡಲಿ.  ಪೊಲೀಸರೇ ಯಾಕೇ ನಿರ್ಧಾರ ಕೈಗೊಂಡು ನಮ್ಮ ಮಗಳನ್ನ ಅವನೊಂದಿಗೆ ಕಳುಹಿಸಬೇಕು ಎಂದು ಯುವತಿಯ ತಂದೆಯಿಂದ ಪೊಲೀಸರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನನ್ನ ಮಗಳನ್ನ ಡ್ರಗ್ಸ್‌ ಹಾಗೂ ನೀಲಿ ಚಿತ್ರ ತೋರಿಸಿ ಬೆದರಿಕೆ ಹಾಕಿದ್ದಾರೆ.  ಅವಳು ಒತ್ತಡದಿಂದ ಅವನೊಂದಿಗೆ ಹೋಗಿದ್ದಾರೆ.  ಪೊಲೀಸರು ದೂರು ದಾಖಲಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಮೈಸೂರಿನ ಲಕ್ಷೀಪುರಂ ಪೊಲೀಸ್‌ ಠಾಣೆಯ ಎದರು ಅಳಲು ತಂದೆ ತೋಡಿಕೊಂಡಿದ್ದಾರೆ. ದೂರು ತೆಗೆದುಕೊಳ್ಳುವಂತೆ ಠಾಣೆ ಮುಂದೇಯೆ ನಿಂತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com