ಕೊಪ್ಪಳ : ಖಾಸಗಿ ವೈದ್ಯ ಮಾಡಿದ ಯಡವಟ್ಟಿನಿಂದ ವಿದ್ಯಾರ್ಥಿನಿ ಬಲಿ..!?

ಕೊಪ್ಪಳದಲ್ಲಿ ಖಾಸಗಿ ವೈದ್ಯನ ಚಿಕಿತ್ಸೆಯಲ್ಲಿ ಆದ ಯಡವಟ್ಟಿನಿಂದ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ. ಆದರೆ ವೈದ್ಯ ಮಾತ್ರ ತನ್ನ ಆರೋಪವನ್ನು ತಳ್ಳಿಹಾಕುತ್ತಿದ್ದಾನೆ.

ಕೊಪ್ಪಳ ಜಿಲ್ಲೆ ಗಂಗಾವತಿ ನಗರದ ಚನ್ನಪ್ಪ ಅವರ ಮಗಳು ಗಾಯಿತ್ರಿ ಕಳೆದ ಮೂರ್ನಾಲ್ಕು ದಿನದಿಂದ ಜ್ವರದಿಂದ ಬಳಲಿದ್ದಾಳೆ. ಆರಂಭದಲ್ಲಿ ನಗರದಲ್ಲಿರೋ ಭಾರತ ಕ್ಲೀನಿಕ್ ವೈದ್ಯ ಸಂತೋಷ್ ಕುಮಾರ್ ಬಳಿ ಚಿಕಿತ್ಸೆ ಕೊಡಿಸಿದ್ದಾರೆ.

ಚಿಕಿತ್ಸೆಗೆ ಬಂದ ಬಾಲಕಿಗೆ ಡಾ, ಸಂತೋಷ್ ಕುಮಾರ್ ಬಾಲಕಿ ತೊಡೆಭಾಗದಲ್ಲಿ ಇಂಜೆಕ್ಷನ್ ಮಾಡಿದ್ದಾನೆ. ಆದರೆ ಅದು ರಿಯಾಕ್ಷನ್ ಆಗಿ ಹಸಿರು ಬಣ್ಣಕ್ಕೆ ತಿರುಗಿ ಬಾವು ಬಂದು ಮಗು ಮೃತಪಟ್ಟಿದೆ ಅಂತ ಪೋಷಕರು ಹೇಳುತ್ತಿದ್ದಾರೆ. ವೈದ್ಯ ನ ಯಡವಟ್ಟಿನಿಂದ ನಮ್ಮ ಮಗಳು ಮೃತಪಟ್ಟಿದೆ ಅಂತ ಪೋಷಕರು ಆರೋಪಿಸ್ತಿದ್ದಾರೆ

ಚಿಕಿತ್ಸೆ ನೀಡಿದ ವೈದ್ಯ ಬಾಲಕಿ ಇಂಜೆಕ್ಷನ್ ರಿಯಾಕ್ಷನ್ ದಿಂದ  ಸಾವನಪ್ಪಿಲ್ಲ. ಇದು  ಸತ್ಯಕ್ಕೆ ದೂರವಾದ ಮಾತು. ಪೋಷಕರು ಮಗಳನ್ನು ಕಳೆದುಕೊಂಡ ಆಕ್ರೋಶದಲ್ಲಿ ಈ ರೀತಿ ಆರೋಪಿಸ್ತಿದ್ದಾರೆ. ಒಂದು ವೇಳೆ ಬಾಲಕಿ ಸಾವಿಗೆ ಡಾಕ್ಟರ್ ನೀಡಿದ ಇಂಜೆಕ್ಷನ್ ಕಾರಣ ಆಗಿದ್ರೆ ಇಂಜೆಕ್ಷನ್ ತೆಗೆಕೊಂಡಾಗಲೇ ಬಾಲಕಿ ಸಾವನಪ್ಪುತ್ತಿದ್ದಳೆಂದು ವೈದ್ಯರ ಸ್ಪಷ್ಟನೆ ನೀಡಿದ್ದಾರೆ. ಬಾಲಕಿ ಪೋಷಕರಿಗೆ ಪರಿಹಾರ ನೀಡೋದಾಗಿ ವೈದ್ಯರು ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com