ಬೆಂಗಳೂರು : ಹೃದಯಾಘಾತದಿಂದ ಹಿರಿಯ ಪತ್ರಕರ್ತ ಕೇಶವ್ ರಾವ್ ವಿಧಿವಶ

ಬೆಂಗಳೂರಿನಲ್ಲಿ ಹೃದಯಾಘಾತದಿಂದ ಹಿರಿಯ ಪತ್ರಕರ್ತ ಕೇಶವ್ ರಾವ್ ವಿಧಿವಶರಾಗಿದ್ದಾರೆ. ಎನ್ ಟಿವಿಯ ಹಿರಿಯ ವರದಿಗಾರರಾಗಿ ಕೆಲ ಮಾಡುತ್ತಿದ್ದ ಕೇಶವ್ ರಾವ್(37) ಮೃತಪಟ್ಟಿದ್ದಾರೆ. ಎನ್ ಟಿವಿ 24/7 ಆಂದ್ರಪ್ರದೇಶ ಮೂಲದ ಸುದ್ದಿ ವಾಹಿನಿಯಲ್ಲಿ ಕೇಶವ್ ರಾವ್ ವರದಿಗಾರರಾಗಿದ್ದರು.

ಕಳೆದ 9 ವರ್ಷಗಳಿಂದ ಬೆಂಗಳೂರು ಪ್ರತಿನಿಧಿಯಾಗಿ‌ ಕೆಲಸ ಮಾಡುತ್ತಿದ್ದರು. ಉತ್ತರಹಳ್ಳಿಯ ನಾಗಪ್ಪ ಲೇಔಟ್ ನಲ್ಲಿ ಮನೆಯಲ್ಲಿ ವಾಸವಿದ್ದರು. ಮನೆಯಲ್ಲಿದ್ದಾಗ ಹೃದಯಾಘಾತ ಸಂಭವಿಸಿ ಕೇಶವ ರಾವ್ ನಿಧನರಾಗಿದ್ದಾರೆ. ಭಾನುವಾರ ಸಾಯಂಕಾಲ ಬೆಂಗಳೂರಿನಲ್ಲಿ ಅಂತ್ಯಕ್ರಿಯೆ ನೆರವೇರಿದೆ.

Leave a Reply

Your email address will not be published.

Social Media Auto Publish Powered By : XYZScripts.com