ಸಿದ್ದರಾಮಯ್ಯ, ಲಿಕ್ಕರ್ ಮೇಲಿನ ಟ್ಯಾಕ್ಸ್ ಹೆಚ್ಚಿಸಿ ಉಚಿತ ಅಕ್ಕಿ ನೀಡಿದ್ದಾರೆ : HDK

ಕೊಪ್ಪಳದಲ್ಲಿ ಇಂದು ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಯಿತು. ಕೊಪ್ಪಳ ದ ಸಾರ್ವಜನಿಕ ಮೈದಾನದಲ್ಲಿ ನಡೆದ ಬೃಹತ್ ಕಾರ್ಯಕರ್ತರ ಸಮಾವೇಶದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಮಾತನಾಡಿ ‘ ಜೆಡಿಎಸ್ ಗೆ ಅಧಿಕಾರ ಕೊಟ್ರೆ ರೈತರ ಸಾಲ ಸಂಪೂರ್ಣ‌ ಮನ್ನಾ ಮಾಡುತ್ತೇನೆ.

‘ ಅನ್ನ ಭಾಗ್ಯದ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಮದ್ಯ ಭಾಗ್ಯ ಬಗ್ಗೆಯೂ ಹೇಳಲಿ. ಚೀಫ್ ಲಿಕ್ಕರ್ ಮೇಲಿನ ಟ್ಯಾಕ್ಸ್ ಹೆಚ್ಚಿಸಿ, ಉಚಿತ ಅಕ್ಕಿ ನೀಡ್ತಿದ್ದಾರೆ, ಮದ್ಯದ ಮೇಲಿನ ಟ್ಯಾಕ್ಸ್ ಹೆಚ್ಚಿಸಿರೋ ಬಗ್ಗೆ ಸಿಎಂ ಹೇಳಲಿ ‘

‘ ನಾನು ಸಿಎಂ ಆಗಿದ್ದಾಗ ಪೊಲೀಸ್ ರಕ್ಷಣೆಯಲ್ಲಿ‌ ಕೆಲಸ‌ ಮಾಡಲಿಲ್ಲ, ಜನರ ನಡುವೆ ಕೆಲಸ ಮಾಡಿದ್ದೇನೆ,ನಾನು ಸಮ್ಮಿಶ್ರ ಸರಕಾರ ಮಾಡಲು ನಿಮ್ಮ‌ ಮುಂದೆ ಬಂದಿಲ್ಲ, ನನಗೆ 113 ಜನ ಶಾಸಕರನ್ನು ಕೊಡಿ, ನಿಮ್ಮನ್ನು ಉಳಿಸುತ್ತೇನೋ ಇಲ್ಲವೋ ನೋಡಿ, ನಾನು ಎಷ್ಟು ದಿನ ಬದುಕುತ್ತೇನೆ ಅನ್ನೋದು ಗೊತ್ತಿಲ್ಲ..ಇಸ್ರೇಲ್ ನಲ್ಲಿಯೇ ನಾನು ಸಾಯಬೇಕಿತ್ತು.

‘ ನಿಮ್ಮ ಆರ್ಶೀರ್ವಾದಿಂದ ಎರಡನೇ ಜನ್ಮ ಎತ್ತಿ ಬಂದಿದ್ದೇನೆ. ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದರೂ ಇಸ್ರೇಲ್ ಪ್ರವಾಸ ಮಾಡಿ ಕೃಷಿ ಅಧ್ಯಯನ ಮಾಡಿದ್ದೇನೆ. ನಿಮ್ಮ ಕೈ ಮುಗಿದು ಕೇಳ್ತೀನಿ ದಯವಿಟ್ಟು ಇದೊಂದು‌ ಬಾರಿ ನನಗೆ ಅವಕಾಶ ಕೊಡಿ ‘ ಎಂದರು.

Leave a Reply

Your email address will not be published.

Social Media Auto Publish Powered By : XYZScripts.com