ನಂಜನಗೂಡು : ಬೋನಿನಲ್ಲಿ ಸೆರೆಯಾದ ಎರಡು ವರ್ಷದ ಗಂಡು ಚಿರತೆ..!

 

ನಂಜನಗೂಡು ತಾಲೂಕಿನ ಎಂ.ಕೋಣನಹಳ್ಳಿ ಗ್ರಾಮದಲ್ಲಿ ಗಂಡು ಚಿರತೆಯೊಂದು ಸೆರೆಯಾಗಿದೆ. ಗ್ರಾಮದ ರಾಮಪ್ಪ ಎಂಬವರ ಜಮೀನಿನಲ್ಲಿ ಇರಿಸಿದ್ದ‌ ಬೋನಿನಲ್ಲಿ ಎರಡು ವರ್ಷದ ಚಿರತೆ ಸಿಕ್ಕಿ ಬಿದ್ದಿದೆ.

ಕಳೆದ ನಾಲ್ಕು ದಿನಗಳ ಹಿಂದೆ ಇದೇ ಚಿರತೆ ಗ್ರಾಮದ ಹಸುವನ್ನು ತಿಂದು ಹಾಕಿತ್ತು. ಇದರಿಂದ ಗ್ರಾಮಸ್ಥರಲ್ಲಿ ಭಯದ ವಾತಾವರಣ ಉಂಟಾಗಿತ್ತು. ಹಸುವಿನ ಉಳಿದ ಮಾಂಸವನ್ನು ಬೇಕಂತಲೇ ಬೋನಿನಲ್ಲಿ ಇಡಲಾಗಿತ್ತು. ಮಾಂಸ ಸೇವಿಸಲು ಬಂದಾಗ ಚಿರತೆ ಬೋನಿಗೆ ಬಿದ್ದು ಸೆರೆಯಾಗಿದೆ.

Leave a Reply

Your email address will not be published.