ಡಾರ್ವಿನ್ ಸಿದ್ಧಾಂತ ಸುಳ್ಳು, ಶಾಲೆಯಲ್ಲಿ ಕಲಿಸುವುದನ್ನು ನಿಲ್ಲಿಸಬೇಕು : BJP ಮುಖಂಡ

ಖ್ಯಾತ ಜೀವ ವಿಜ್ಞಾನಿ ಚಾರ್ಲ್ಸ್ ಡಾರ್ವಿನ್ ಪ್ರತಿಪಾದಿಸಿದ ಜೀವ ವಿಕಾಸ ಸಿದ್ಧಾಂತ ವೈಜ್ಞಾನಿಕವಾಗಿ ಸುಳ್ಳು ಹಾಗೂ ನಿರಾಧಾರವಾಗಿದೆ ಎಂದು ಕೇಂದ್ರ ಪ್ರಾಥಮಿಕ ಶಿಕ್ಷಣ ಸಚಿವರಾಗಿರುವ ಸತ್ಯಪಾಲ್ ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ.

‘ ಡಾರ್ವಿನ್ನನ ‘ ಮಂಗನಿಂದ ಮಾನವ ‘ ಎಂಬ ಜೀವವಿಕಾಸ ಸಿದ್ಧಾಂತ ಸುಳ್ಳು, ಶಾಲೆ ಹಾಗೂ ಕಾಲೇಜುಗಳಲ್ಲಿ ಅದರ ಬಗ್ಗೆ ಪಾಠ ಮಾಡುವುದನ್ನು ನಿಲ್ಲಿಸಬೇಕು. ಮಾನವ ಮಂಗನಿಂದ ರೂಪಾಂತರ ಹೊಂದಿಲ್ಲ. ಮುಂಚೆಯಿಂದಲೂ ಮನುಷ್ಯ ಮನುಷ್ಯನಾಗಿಯೇ ಇದ್ದಾನೆ. ಮುಂದೆಯೂ ಮನುಷ್ಯನಾಗಿಯೇ ಉಳಿಯಲಿದ್ದಾನೆ ‘ ಎಂದು ಸತ್ಯಪಾಲ್ ಹೇಳಿದ್ದಾರೆ.

‘ ಪೂರ್ವಜರು ಯಾರೂ ಮಂಗ ಮಾನವನಾಗಿ ಪರಿವರ್ತನೆ ಹೊಂದಿದನ್ನು ಕಂಡಿಲ್ಲ, ಎಲ್ಲಿಯೂ ಅದರ ಬಗ್ಗೆ ಬರೆದಿಲ್ಲ, ಹೇಳಿಲ್ಲ. ನಮ್ಮ ಹಿರಿಯರು ಈ ಕುರಿತು ಕಥೆಗಳನ್ನು ಹೇಳಿಲ್ಲ, ಪುಸ್ತಕಗಳನ್ನೂ ಬರೆದಿಲ್ಲ ‘ ಎಂದಿದ್ದಾರೆ.

 

Leave a Reply

Your email address will not be published.