ಬಾಗಲಕೋಟೆ : ಫೈನಾನ್ಸ್ ಕಂಪನಿಯಿಂದ 11 ಕೋಟಿ ಪಂಗನಾಮ : ಮಾಲೀಕ ಪರಾರಿ..!

ಬಾಗಲಕೋಟೆಯ ಫೈನಾನ್ಸ್ ಕಂಪನಿಯೊಂದರಲ್ಲಿ ಹಳ್ಳಿ ಜನರು ಕೂಡಿಟ್ಟಿದ್ದ  ಕೋಟ್ಯಾಂತರ ರೂಪಾಯಿ ಪಂಗನಾಮ ಬಿದ್ದಿದೆ. ಅಂದಹಾಗೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮದ ಕಾಳಿಕಾದೇವಿ ಪೈನಾನ್ಸ್ ಕಂಪನಿಯ ಮಾಲೀಕ ಸುಮಾರು ೧೧ ಕೋಟಿ ರೂಪಾಯಿಗಳನ್ನ ದೋಚಿ ಪರಾರಿಯಾಗಿದ್ದಾನೆ.

ಹಲಕುರ್ಕಿಯ ಮೌನೇಶ್ ಬಡಗೇರ್ ಎಂಬಾತ ಕಾಳಿಕಾ ದೇವಿ ಹೆಸರಲ್ಲಿ ಫೈನಾನ್ಸ್ ನಡೆಸುತ್ತಿದ್ದ. ಒಂದು ನೂರ ರೂಪಾಯಿಗೆ ೨ ರೂ. ಬಡ್ಡಿ ಕೊಡ್ತಿನಿ ಅಂತ ಸುಮಾರು ೨೦೦ ಕ್ಕೂ ಹೆಚ್ಚು ಜನರ ಸುಮಾರು ೧೧ ಕೋಟಿ ರೂಪಾಯಿ ಎಗರಿಸಿ ಪರಾರಿಯಾಗಿದ್ದಾನೆ. ಬಹುತೇಕರು ಕೂಲಿ ಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿದ್ದ ಹಡಜನರು. ಇನ್ನು ಕೆಲಸವರು ಆಸ್ತಿ ಪಾಸ್ತಿ ಮಾರಿ, ಮಕ್ಕಳ‌ಮದುವೆಗೆ ಅಂತ ಹಣ ಕೂಡಿಟ್ಟಿದ್ದರು. ಒಬ್ಬೊಬ್ಬರು ೧೫ ಲಕ್ಷ, ೨೦ ಲಕ್ಷ ರೂ. ಗಳಷ್ಟು ಫೈನಾನ್ಸ್ ನಲ್ಲಿ ಜಮಾ ಮಾಡಿದ್ದರು. ಇನ್ನೂ ಕೆಲವರು ನಿರ್ಗತಿಕ ವೈದ್ಧರೂ ಸಹ ಹಣ ಜಮಾವಣೆ ಮಾಡಿದ್ದರು.

ಆದ್ರೆ ನೋಟ್ ಬ್ಯಾನ್ ತದನಂತರ ಫೈನಾನ್ಸ್ ಮಾಲೀಕ ಮೌನೇಶ್ ಬಡಿಗೇರ ಕೈಗೆ ಸಿಗ್ತಿಲ್ವಂತೆ. ಫೈನಾನ್ಸ್ ಗೆ ಬೀಗ ಜಡಿದು ಕಳೆದ ೬ ತಿಂಗಳಿನಿಂದ ಪರಾರಿಯಾಗಿದ್ದು ಹಣ ಕಳೆದುಕೊಂಡ ಜನರು ಪರದಾಡ್ತಿದ್ದಾರೆ. ಇತ್ತ ಪೊಲೀಸರಿಗೂ ದೂರು ನೀಡಿದರು ಪ್ರಯೋಜನ ಆಗಿಲ್ಲ ಅಂತ ದೂರ್ತಿದ್ದಾರೆ. ಹೀಗಾಗಿ ಇಂದು ಫೈನಾನ್ಸ್ ಕಂಪನಿ ಎದುರುಗಡೆ ಪ್ರತಿಭಟಿಸುತ್ತಿದ್ದಾರೆ.

Leave a Reply

Your email address will not be published.