WATCH : Kohli ಯಂತೆ ಬ್ಯಾಟ್ ಬೀಸಿದ ಶುಭಮನ್ ಗಿಲ್ : ಗಮನ ಸೆಳೆದ U-19 ಸ್ಟಾರ್.!

ನ್ಯೂಜಿಲೆಂಡ್ ನಲ್ಲಿ ಅಂಡರ್-19 ವಿಶ್ವಕಪ್ ನಡೆಯುತ್ತಿದೆ. ಪೃಥ್ವಿ ಶಾ ನೇತೃತ್ವದ ಭಾರತ ತಂಡ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಜಿಂಬಾಬ್ವೆ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ 10 ವಿಕೆಟ್ ಜಯ ಸಾಧಿಸಿ ‘ಬಿ’ ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿತು.

ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಆರಂಭಿಕ ಬ್ಯಾಟ್ಸಮನ್ ಶುಭಮನ್ ಗಿಲ್ 90 ರನ್ ಗಳಿಸಿದ್ದರು. ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಶುಭಮನ್ 13 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದರು. ಅದರಲ್ಲಿ ಒಂದು ಶಾಟ್ ಮಾತ್ರ, ವಿರಾಟ್ ಕೊಹ್ಲಿ ಬ್ಯಾಟಿಂಗ್ ನೆನಪಿಸುವಂತಿತ್ತು.

ಪಂದ್ಯದ 14ನೇ ಓವರಿನಲ್ಲಿ Short arm jab ಶಾಟ್ ಬಾರಿಸಿ ಮಿಡ್ ವಿಕೆಟ್ ಕ್ಷೇತ್ರದಲ್ಲಿ ಸಿಕ್ಸರ್ ಗೆ ಅಟ್ಟಿದ ಶುಭಮನ್, ಕ್ರಿಕೆಟ್ ಪಂಡಿತರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದೇ ರೀತಿಯ ಹೊಡೆತವನ್ನು ಕೊಹ್ಲಿ, ಕಳೆದ ವರ್ಷ ಇಂಗ್ಲೆಂಡ್ ಬೌಲರ್ ಕ್ರಿಸ್ ವೋಕ್ಸ್ ಎಸೆತದಲ್ಲಿ ಬಾರಿಸಿದ್ದರು.

ಅಂಡರ್-19 ಕ್ರಿಕೆಟ್ ನ ಕೊಡುಗೆಯಾದ ವಿರಾಟ್ ಕೊಹ್ಲಿ ಇಂದು ವಿಶ್ವದ ಸರ್ವಶ್ರೇಷ್ಟ ಬ್ಯಾಟ್ಸಮನ್ ಗಳಲ್ಲಿ ಒಬ್ಬರರಾಗಿದ್ದಾರೆ. ಇದೀಗ ಶುಭಮನ್ ಗಿಲ್  ಕೂಡ ಅಭಿಮಾನಿಗಳಲ್ಲಿ ಅಂತಹುದೇ ಭರವಸೆಯನ್ನು ಮೂಡಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com