ಮನೆಗೆ ನುಗ್ಗಿದ ಚಿರತೆ : Safe ಆಗಿ ಹೊರಬಂದ್ರು ಶೌಚಾಲಯದಲ್ಲಿ ಅಡಗಿಕೊಂಡಿದ್ದ ಅತ್ತೆ ಸೊಸೆ

ತುಮಕೂರು : ಶನಿವಾರ ಬೆಳಗ್ಗೆ ಚಿರತೆಯೊಂದು ಮನೆಯೊಳಗೆ ನುಗ್ಗಿದ್ದು, ಮನೆಯಲ್ಲಿದ್ದ ಅತ್ತೆ ಸೊಸೆ ಇಬ್ಬರು ಶೌಚಾಲಯದೊಳಗೆ ಅಡಗಿಕೊಂಡಿದ್ದ ಪ್ರಕರಣ ಸುಖಾಂತ್ಯಗೊಂಡಿದೆ.

ಇಂದು ಬೆಳಗ್ಗೆ ರಂಗನಾಥ್ ಎಂಬುವವರ ಮನೆಗೆ ಚಿರತೆಯೊಂದು ಬಂದಿದ್ದು, ಬಾಗಿಲು ತೆಗೆಯುತ್ತಿದ್ದಂತೆ ಮನೆಯೊಳಗೆ ದಾಳಿ ಇಟ್ಟಿದೆ. ಇದನ್ನು ನೋಡಿ ಗಾಬರಿಗೊಂಡ ಅತ್ತೆ ಸೊಸೆ ಇಬ್ಬರೂ ಬೆಳಗ್ಗಿನಿಂದಲೂ ಶೌಚಾಲಯದೊಳಗೆ ಅಡಗಿ ಕುಳಿತಿದ್ದು ಈಗ ಗೋಡೆ ಒಡೆದು ಅವರಿಬ್ಬರನ್ನೂ ಹೊರಗೆ ಕರೆತರಲಾಗಿದೆ.

ಇಂದು 8 ಗಂಟೆಯ ಸುಮಾರಿಗೆ ಯಾರೋ ಮನೆಯ ಬಾಗಿಲು ಬಡಿದಂತಾಗಿದೆ. ಈ ವೇಳೆ ರಂಗನಾಥ್‌ ಬಾಗಿಲು ತೆಗೆದ ಕೂಡಲೆ ಚಿರತೆ ಮನೆಯೊಳಗೆ ನುಗ್ಗಿದೆ. ಇದರಿಂದ ಗಾಬರಿಗೊಂಡ ರಂಗನಾಥ್‌ ಮನೆಯ ಹೊರಗೆ ಬಂದು ಬಾಗಿಲು ಹಾಕಿದ್ದಾರೆ. ಬಳಿಕ ಹಂಡತಿ ಹಾಗೂ ತಾಯಿಗೆ ಈ ವಿಚಾರ ತಿಳಿಸಿದ್ದಾರೆ.ಇದರಿಂದ ಗಾಬರಿಯಾದ ಅತ್ತೆ ಸೊಸೆ ಇಬ್ಬರೂ ಶೌಚಾಲಯದಲ್ಲಿ ಅಡಗಿ ಕುಳಿತಿದ್ದರು. ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಜಯನಗರ ಪೊಲೀಸರು ಹಾಸನ ಹಾಗೂ ಬನ್ನೇರುಘಟ್ಟದಿಂದ ಅರವಳಿಕೆ ತಜ್ಙರು,ಎಸ್‌. ಪಿ ದಿವ್ಯಾ ಗೋಪೀನಾಥ‌, ಜಿಲ್ಲಾಧಕಾರಿ ಮೋಹನ್‌  ರಾಜ್‌ ಸ್ಥಳಕ್ಕಾಗಮಿಸಿದ್ದು, ಕಾರ್ಯಾಚರಣೆಗೆ ಮುಂದಾಗಿದ್ದರ.

ಮನೆಯೊಳಗೆ ಕಣ್ಣಿಗೆ ಕಾಣದಂತೆ ಚಿರತೆ ಅಡಗಿ ಕುಳಿತಿದ್ದು, ಇದನ್ನು ಹಡಿಯುವ ಸಲುವಾಗಿ ಪಟಾಕಿ, ಸಿಡಿಮದ್ದುಗಳನ್ನು ಸಿಡಿಸಿ ಗಂಟೆಗಟ್ಟಲೆ ಕಾದರೂ ಚಿರತ ಅಲ್ಲಾಡಲಿಲ್ಲ. ಕಾದೂ ಕಾದೂ ಸುಸ್ತಾದ ಅಧಿಕಾರಿಗಳು ಕೊನೆಗೆ  ಹ್ಯಾಂಡ್‌ಗ್ಲೌಸ್‌ ಹೆಲ್ಮೆಟ್‌ ಪ್ಲಾಸ್ಟಿಕ್‌ ಜಾಕೆಟ್‌ ಸೇರಿದಂತೆ ಹಲವು ರಕ್ಷಣಾ ಕವಚಗಳನ್ನು ಧರಿಸಿ ಮನೆಯೊಳಗೆ ನುಗ್ಗಿ ಚಿರತೆ ಹಿಡಿಯುವ ಸಾಹಸಕ್ಕೆ ಮಂದಾಗಿದ್ದು. ಆದರೆ ಇದು ಅಪಾಯ ಎಂದು ಸದ್ಯಕ್ಕೆ ಮನೆಯಲ್ಲಿದ್ದ ಇಬ್ಬರು ಮಹಿಳೆಯರನ್ನು ಗೋಡೆ ಒಡೆದು ರಕ್ಷಣೆ ಮಾಡಿದ್ದಾರೆ.

ರಾತ್ರಿಯಾದ ಬಳಿಕ ಅವರಳಿಕೆ ಬಳಸಿ ಚಿರತೆಯನ್ನು ಹಿಡಿಯುವ ಕುರಿತು ಚರ್ಚೆ ನಡೆಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com