ಹಣದಾಸೆಗಾಗಿ ತನ್ನ 13 ವರ್ಷದ ಮಗಳ ಕನ್ಯತ್ವವನ್ನೇ ಮಾರಲು ಹೊರಟ ಪಾಪಿ ತಾಯಿ !

ಮಾಸ್ಕೋ : ಮಹಿಳೆಯೊಬ್ಬಳು ಶ್ರೀಮಂತ ವ್ಯಕ್ತಿಯೊಬ್ಬನಿಗೆ ತನ್ನ ಮಗಳ ಕನ್ಯತ್ವವನ್ನೇ ಮಾರಾಟ ಮಾಡಲು ಹೊರಟ ಘಟನೆ ರಷ್ಯಾದಲ್ಲಿ ನಡೆದಿದೆ. ಆರೋಪಿ ಹೆಸರು ಇರಿನಾ ಗ್ಲಾಡಿಕ್‌  (35) ಎಂದು ತಿಳಿದುಬಂದಿದೆ.

ಇರಿನಾಗೆ 13 ವರ್ಷದ ಮಗಳಿದ್ದಾಳೆ. ಈ ಮಗಳ ಮೊದಲ ರಾತ್ರಿಗೆ ತಾಯಿಯೇ ಎಲ್ಲಾ ಸಿದ್ಧತೆ ಮಾಡಿದ್ದಳು. ಅಲ್ಲದೆ ಮಗಳನ್ನು ಕೊಂಡು ಕೊಳ್ಳುತ್ತಿದ್ದ ವ್ಯಕ್ತಿಯಿಂದ 19,100 ಡಾಲರ್‌ ಹಣವನ್ನು ಪಡೆದಿದ್ದಳು. ಅಲ್ಲದೆ ಎಲ್ಲವನ್ನು ಸಿದ್ಧಪಡಿಸಿ ಮಗಳನ್ನು ಮನೆಯಲ್ಲೇ ಬಿಟ್ಟು ಸ್ನೇಹಿತೆ ಜೊತೆ ಬೇರೆಡೆಗೆ ಪರಾರಿಯಾಗಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

ರಷ್ಯಾ ಪೊಲೀಸರು ಹಾಗೂ ಡಿಕೆಕ್ಟಿವ್‌ಗಳಿಗೆ ಯಾರೋ ಈ ಬಗ್ಗೆ ಮಾಹಿತಿ ನೀಡಿದ್ದರು. ಇದನ್ನು ಆಧಾರವಾಗಿಟ್ಟುಕೊಂಡು ಪೊಲೀಸರು ಕುಟುಕು ಕಾರ್ಯಾಚರಣೆ ನಡೆಸುವ ವೇಳೆ ಮಾಸ್ಕೋದ ರೆಸ್ಟೋರೆಂಟ್‌ ಒಂದರಲ್ಲಿ ಇರಿನಾ ಸಿಕ್ಕಿಬಿದ್ದಿದ್ದಾಳೆ. ಸದ್ಯ ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ.

ಇರಿನಾ ಮಾಡೆಲ್‌ ಆಗಿ ಕೆಲಸ ಮಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

 

 

Leave a Reply

Your email address will not be published.