ಯಶಸ್ವಿಯಾಯ್ತು ಆಪರೇಷನ್‌ ಚೀತಾ : ಅಡುಗೆ ಮನೆಯಲ್ಲಿದ್ದ ಚಿರತೆ ಹಿಡಿದ ಸಿಬ್ಬಂದಿ

ತುಮಕೂರು : ಮನೆಯಲ್ಲಿ ಅಡಗಿಕೊಂಡಿದ್ದ ಚಿರತೆಯನ್ನ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಸತತ 9ಗಂಟೆಗಳ ಪರಿಶ್ರಮದ ಬಳಿಕ ಆಪರೇಷನ್ ಚೀತಾ ಯಶಸ್ವಿಯಾಗಿದ್ದು, ಜನ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಡಾ.ನಿಖಿತಾ ಹಾಗೂ ಡಾ.ಸುಜಯ್‌ ನೇತೃತ್ವದ ತಂಡ ಚಿರತೆಗೆ ಅರವಳಿಕೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಇಂದು ಬೆಳಗ್ಗೆ 8 ಗಂಟೆಯ ಸುಮಾರಿಗೆ ರಂಗನಾಥ್‌  ಎಂಬುವವರ ಮನೆಗೆ ಚಿರತೆ ನುಗ್ಗಿತ್ತು. ಇದರಿಂದ ಗಾಬರಿಗೊಂಡ ರಂಗನಾಥ್‌ ಮನೆಯ ಹೊರಗೆ ಬಂದು ಬಾಗಿಲು ಹಾಕಿದ್ದು, ಬಳಿಕ ಹಂಡತಿ ಹಾಗೂ ತಾಯಿಗೆ ಈ ವಿಚಾರ ತಿಳಿಸಿದ್ದರು. ಇದರಿಂದ ಗಾಬರಿಯಾದ ಅತ್ತೆ ಸೊಸೆ ಇಬ್ಬರೂ ಶೌಚಾಲಯದಲ್ಲಿ ಅಡಗಿ ಕುಳಿತಿದ್ದರು. ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಜಯನಗರ ಪೊಲೀಸರು ಹಾಸನ ಹಾಗೂ ಬನ್ನೇರುಘಟ್ಟದಿಂದ ಅರವಳಿಕೆ ತಜ್ಙರು,ಎಸ್‌. ಪಿ ದಿವ್ಯಾ ಗೋಪೀನಾಥ‌, ಜಿಲ್ಲಾಧಕಾರಿ ಮೋಹನ್‌  ರಾಜ್‌ ಸ್ಥಳಕ್ಕಾಗಮಿಸಿದ್ದು, ಕಾರ್ಯಾಚರಣೆ ನಡೆಸಿದ್ದರು. ಅಲ್ಲದೆ ಮನೆಯೊಳಗೆ ಕಣ್ಣಿಗೆ ಕಾಣದಂತೆ ಚಿರತೆ ಅಡಗಿ ಕುಳಿತಿದ್ದು, ಇದನ್ನು ಹಡಿಯುವ ಸಲುವಾಗಿ ಪಟಾಕಿ, ಸಿಡಿಮದ್ದುಗಳನ್ನು ಸಿಡಿಸಿ ಗಂಟೆಗಟ್ಟಲೆ ಕಾದರೂ ಚಿರತ ಅಲ್ಲಾಡಲಿಲ್ಲ. ಕಾದೂ ಕಾದೂ ಸುಸ್ತಾದ ಅಧಿಕಾರಿಗಳು ಕೊನೆಗೆ  ಹ್ಯಾಂಡ್‌ಗ್ಲೌಸ್‌ ಹೆಲ್ಮೆಟ್‌ ಪ್ಲಾಸ್ಟಿಕ್‌ ಜಾಕೆಟ್‌ ಸೇರಿದಂತೆ ಹಲವು ರಕ್ಷಣಾ ಕವಚಗಳನ್ನು ಧರಿಸಿ ಮನೆಯೊಳಗೆ ನುಗ್ಗಿ ಚಿರತೆ ಹಿಡಿಯುವ ಸಾಹಸಕ್ಕೆ ಮಂದಾಗಿದ್ದು ಕೊನೆಗೂ ಚಿರತೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com