Mysore : JDS ಪಕ್ಷಕ್ಕೆ ಮತ ಹಾಕಿದ ಸಂಸದ ಪ್ರತಾಪ್‌ ಸಿಂಹ….!!!

ಮೈಸೂರು : ಹುಣಸೂರು ನಗರ ಸಭಾ ಚುನಾವಣೆಯಲ್ಲಿ ಜೆಡಿಎಸ್‌ ಗೆದ್ದು ಅಧಿಕಾರದ ಗದ್ದುಗೆ ಏರಿದೆ. ಘಟಾನುಘಟಿಗಳ ಮಧ್ಯೆಯೇ ಪ್ರಜ್ವಲ್‌ ರೇವಣ್ಣ ತಮ್ಮ ಸಾಮರ್ಥ್ಯ ಏನೆಂಬುದನ್ನು ತೋರಿಸಿದ್ದಾರೆ. ಕೇವಲ 8 ಸ್ಥಾನಗಳನ್ನ ಹೊಂದಿದ್ದರೂ ನಗರಸಭೆಯ ಗದ್ದುಗೆ ಏರಿದ್ದು, ಇದ್ದ 30 ಮತಗಳಲ್ಲಿ 16 ಮತಗಳು ಜೆಡಿಎಸ್‌ ಪಾಲಾಗಿವೆ. ಶಿವಕುಮಾರ್‌ ಎಂಬುವವರು ನಗರಸಭೆಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಶಿವಕುಮಾರ್‌ ಮೊದಲು ಕಾಂಗ್ರಸ್‌ನಲ್ಲಿದ್ದರು, ಆಪರೇಷನ್‌ ಜೆಡಿಎಸ್‌ಗೆ ಒಳಗಾಗಿ ಜೆಡಿಎಸ್‌ ಪಕ್ಷ ಸೇರಿದ್ದರು. ಜೆಡಿಎಸ್‌ ಪಕ್ಷವನ್ನು ಅಧಿಕಾರಕ್ಕೆ ಬರವಂತೆ ಮಾಡಿದ ಆ ಒಂದು ಮತವನ್ನು ಪ್ರತಾಪ್‌ ಸಿಂಹ ಹಾಕಿದ್ದಾರಂತೆ. ಹೌದು ಕಾಂಗ್ರೆಸ್‌ ಪಕ್ಷವನ್ನು ಸೋಲಿಸುವ ಉದ್ದೇಶದಿಂದ ಪ್ರತಾಪ್‌ ಸಿಂಹ ಜೆಡಿಎಸ್‌ಗೆ ಮತ ಹಾಕಿದ್ದಾರೆ.ಅಲ್ಲದೆ ಪ್ರಜ್ವಲ್‌ ರೇವಣ್ಣ ಅವರ ಮಾತಿಗೆ ಬೆಲೆಕೊಟ್ಟು ಪ್ರತಾಪ್‌ ಸಿಂಹ ಜೆಡಿಎಸ್‌ಗೆ ಮತ ಹಾಕಿರುವುದಾಗಿ ಹೇಳಲಾಗುತ್ತಿದೆ.

 

Leave a Reply

Your email address will not be published.

Social Media Auto Publish Powered By : XYZScripts.com