ಇನ್ಮುಂದೆ ಪದ್ಮಾವತ್‌ನ ಗೂಮರ್‌ ಹಾಡಿನಲ್ಲಿ ಕಾಣಲ್ಲ ದೀಪಿಕಾ ಸೊಂಟ……

ಎಲ್ಲಾ ಅಡೆತಡೆಗಳನ್ನು ಮೀರಿ ಪದ್ಮಾವತ್‌ ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದ್ದು, ಇದೇ ಜನವರಿ 25ರಂದು ಚಿತ್ರ ತೆರೆಗೆ ಬರಲಿದೆ.

ಕರ್ಣಿ ಸೇನೆಯ ಕಾರ್ಯಕರ್ತರು ಸಿನಿಮಾದ ಗೂಮರ್‌ ಹಾಡಿನಲ್ಲಿ ದೀಪಿಕಾ ಅವರ ಸೊಂಟ ಕಾಣುತ್ತಿದೆ ಎಂದು ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ನೃತ್ಯದಲ್ಲೂ ಕೆಲವೊಂದು ಬದಲಾವಣೆ ಮಾಡಲಾಗಿದ್ದು, ಕಂಪ್ಯೂಟರ್‌ ಸಹಾಯದಿಂದ ಗೂಮರ್‌ ಹಾಡಿನಲ್ಲಿ ದೀಪಿಕಾ ಅವರ ಸೊಂಟ ಹಾಗೂ ಹೊಟ್ಟೆಯ ಭಾಗವನ್ನು ಮುಚ್ಚಲಾಗಿದೆ. ಯೂಟ್ಯೂಬ್‌ನಲ್ಲಿ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದ್ದು, ಈಗಾಗಲೇ ಆ ವಿಡಿಯೊ 90ಮಿಲಿಯನ್‌ಗೂ ಹೆಚ್ಚು ಬಾರಿ ಜನ ವೀಕ್ಷಿಸಿದ್ದಾರೆ.

ಇಷ್ಟಾದ ಮೇಲೂ ಕರ್ಣಿ ಸೇನೆಯ ಕಾರ್ಯಕರ್ತರು ಸಿನಿಮಾ ಬಿಡುಗಡೆಗೆ ಅನುಮತಿ ನೀಡುವುದಿಲ್ಲ ಎಂದು ಪಟ್ಟು ಹಿಡಿದಿರುವುದು ಥಿಯೇಟರ್‌ ಮಾಲೀಕರ ಭಯಕ್ಕೆ ಕಾರಣವಾಗಿದೆ. ಆದ್ದರಿಂದ ಗುಜರಾತ್‌ನಲ್ಲಿ ಗುಜರಾತ್‌ನಲ್ಲಿ ಚಿತ್ರಮಂದಿರದ ಮಾಲೀಕರು ಸಿನಿಮಾ ಬಿಡುಗಡೆ ಮಾಡುವುದಿಲ್ಲ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com