ಬುದ್ದಿಮಾಂದ್ಯ ಮಗಳ ಮೇಲೆ ನಿರಂತರ ಅತ್ಯಾಚಾರವೆಸಗಿದ ದೊಡ್ಡಪ್ಪ ಬಳಿಕ ಮಾಡಿದ್ದೇನು…?

ಹೊಸಕೋಟೆ : ಬುದ್ದಿಮಾಂದ್ಯ ಮಹಿಳೆ ಮೇಲೆ ಸ್ವಂತ ದೊಡ್ಡಪ್ಪನೇ ಅತ್ಯಾಚಾರ ಮಾಡಿದ ಘಟನೆ ಹೊಸಕೋಟೆ ತಾಲ್ಲೂಕಿನ  ನೀಡಘಟ್ಟ ಗ್ರಾಮದಲ್ಲಿ ನಡೆದಿದೆ. ನಿರಂತರ ಅತ್ಯಾಚಾರದಿಂದ ಮಹಿಳೆ 8ತಿಂಗಳ ಗರ್ಭವತಿಯಾಗಿರುವುದಾಗಿ ತಿಳಿದುಬಂದಿದೆ. ಆರೋಪಿಯನ್ನು ಈಜಾಜ್‌ ಪಾಷಾ (51) ಎಂದು ತಿಳಿದುಬಂದಿದೆ.

ಬುದ್ದಿಮಾಂದ್ಯ ಮಹಿಳೆಯ ವೃದ್ದ ದಂಪತಿ ಕೆಲಸಕ್ಕೆಂದು ಹೋದ ಬಳಿಕ ಪಕ್ಕದ ಮನೆಯಲ್ಲಿದ್ದ ದೊಡ್ಡಪ್ಪ ಆಕೆಯ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸುತ್ತಿದ್ದ. ಮಹಿಳೆ ಸದಾ ಹೊಟ್ಟೆನೋವು ಎನ್ನುತ್ತಿದ್ದ ಪರಿಣಾಮ ಕುಟುಂಬಸ್ಥರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೋರಿಸಿದ್ದಾರೆ. ಆಗ ಆಕೆ ಗರ್ಭವತಿ ಎಂಬ ವಿಚಾರ ಬೆಳಕಿಗೆ ಬಂದಿದೆ.ಅತ್ಯಾಚಾರಿ ದೊಡ್ಡಪ್ಪನ ವಿರುದ್ದ ಹೊಸಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲೋಕದ ಜ್ಞಾನವಿಲ್ಲದೆ 8 ತಿಂಗಳ ಗರ್ಭವತಿಯಾದ ಮಗಳನ್ನು ನೋಡಿ ಪೋಷಕರು ಗೋಳಾಡುತ್ತಿದ್ದು, ಪ್ರತಿನಿತ್ಯ ಕಣ್ಣೀರು ಹಾಕುತ್ತಾ ನ್ಯಾಯಕ್ಕಾಗಿ ಪರದಾಡುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com