ದುನಿಯಾ ವಿಜಿಗೆ 44ರ ಸಂಭ್ರಮ : ಸ್ಮಶಾನದಲ್ಲಿ ಜಂಗ್ಲಿಗೆ ಜೈಕಾರ ಹಾಕಿದ ಅಭಿಮಾನಿಗಳು

ಗದಗ್ : ಸ್ಯಾಂಡಲ್‌ವುಡ್‌ನ ಕರಿಚಿರತೆ ಎಂದೇ ಖ್ಯಾತಿ ಪಡೆದಿರುವ ದುನಿಯಾ ವಿಜಯ್‌ ಅವರು ಇಂದು 44ನೇ ವಸಂತಕ್ಕೆ ಕಾಲಿಟ್ಟಿದ್ದು, ಈ ಬಾರಿ ವಿಜಯ್‌ ಅವರ ಹುಟ್ಟುಹಬ್ಬವನ್ನು ಗದಗ್‌ ನ ಅಭಿಮಾನಿಗಳು ವಿಶೇಷವಾಗಿ ಆಚರಣೆ ಮಾಡಿದ್ದಾರೆ.

ಗದಗ್‌ನ ಅಡವಿ ಸೋಮಾಪುರ ಗ್ರಾಮದ ಅಭಿಮಾನಿಗಳು ದುನಿಯಾ ವಿಜಯ್  ಅವರ 44ನೇ ಹುಟ್ಟುಹಬ್ಬವನ್ನು ಸ್ಮಶಾನದಲ್ಲಿ ಆಚರಿಸಿದ್ದಾರೆ.ಗುರುವಾರ ಮಧ್ಯರಾತ್ರಿ 12 ಗಂಟೆಗೆ ಸ್ಮಶಾನದಲ್ಲಿ ದುನಿಯಾ ವಿಜಯ್‌  ಫೋಟೋ ಇಟ್ಟು ಅದಕ್ಕೆ ಹಾಲಿನ ಅಭಿಷೇಕ ಮಾಡಿ ಫೋಟೋದ ಎದುರು ಹೋಮ ಹವನ ಮಾಡಿದ್ದಾರೆ.

ಅಲ್ಲದೆ ದುನಿಯಾ ವಿಜಿ ಅವರ ಸಿನಿಮಾದ ಹೆಸರುಗಳನ್ನೇ ಮಂತ್ರವಾಗಿ ಪಠಿಸುತ್ತಾ ಪೂಜೆ ನೆರವೇರಿಸಿದ್ದಾರೆ. ಬಳಿಕ ವಿಜಿ ಫೋಟೋ ಮುಂದೆ ಕೇಕ್‌ ಕತ್ತರಿಸಿದ್ದು, ಬಳಿಕ ಕುಣಿದು ಕುಪ್ಪಳಿಸಿದ್ದಾರೆ.

ನಮ್ಮ ನೆಚ್ಚಿನ ನಟ ದುನಿಯಾ ವಿಜಯ್‌, ಅವರು ಬಡತನದಿಂದ ಬೆಳೆದುಬಂದು ಎತ್ತರಕ್ಕೆ ಏರಿದ್ದಾರೆ. ಅವರು ಇನ್ನಷ್ಟು ಸಿನಿಮಾಗಳನ್ನು ಮಾಡಲಿ. ಯಶಸ್ಸು ಸಾಧಿಸಲು ಎಂಬುದೇ ನಮ್ಮೆಲ್ಲರ ಆಸೆ ಎಂದಿದ್ದಾರೆ.

ಮೂಢನಂಬಿಕೆ ನಿರ್ಮೂಲನೆಯಾಗಬೇಕು ಎಂಬ ಕಾರಣಕ್ಕೆ ಸ್ಮಶಾನದಲ್ಲಿ ಹುಟ್ಟುಹಬ್ಬ ಆಚರಿಸಿರುವುದಾಗಿ ಅಭಿಮಾನಿಗಳು ಹೇಳಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com