ಮಗುವಿನ ಪ್ರಾಣವನ್ನೇ ತೆಗೆದುಬಿಡ್ತು Pain killer Injection….!!

ದೆಹಲಿ : ವೈದ್ಯರ ನಿರ್ಲಕ್ಷ್ಯದಿಂದಾಗಿ 4 ತಿಂಗಳ ಮಗುವೊಂದು ಮೃತಪಟ್ಟ ಘಟನೆ ದೆಹಲಿಯಲ್ಲಿ ನಡದಿದೆ.

ಮಗುವಿನ ಮೇಲ್ತುಟಿಗೆ ಹೊಲಿಗೆ ಹಾಕಲಾಗಿತ್ತು. ತಾತ್ಕಾಲಿಕ ನೋವು ನಿವಾರಣೆಗಾಗಿ ಮಗುವಿಗೆ ವೈದ್ಯರು ಪೇಯ್ನ್‌ ಕಿಲ್ಲರ್‌ ಇಂಜೆಕ್ಷನ್‌ ಕೊಟ್ಟಿದ್ದರು. ಇದಾದ ಕೆಲ ಹೊತ್ತಿನಲ್ಲೇ ಮಗು ಪ್ರಾಣಬಿಟ್ಟಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನವರಿ 17ರಂದು ಮಗುವನ್ನು ದೆಹಲಿಯ ಜೈಪುರ್‌ ಗೋಲ್ಡನ್‌ ಆಸ್ಪತ್ರೆಗೆ ಕರೆತರಲಾಗಿತ್ತು. ಮಗುವಿಗೆ ತುಟಿಯ ಸಮಸ್ಯೆ ಇದ್ದ ಕಾರಣ ತುಟಿಗೆ ಹೊಲಿಗೆ ಹಾಕುವುದಾಗಿ ವೈದ್ಯರು ಹೇಳಿದ್ದರು. ಅದಕ್ಕೆ ಪೋಷಕರೂ ಒಪ್ಪಿಗೆ ನೀಡಿದ್ದರು. ಶಸ್ತ್ರ ಚಿಕಿತ್ಸೆಯ ಬಳಿಕ ಮಗುವನ್ನು ಪೋಷಕರಿಗೆ ನೀಡಿದ್ದರು. ಬಳಿಕ ಮಗು ಒಂದೇ ಸಮನೆ ಅಳುತ್ತಿತ್ತು. ಆದ್ದರಿಂದ ಮತ್ತೆ ಮಗುವನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿದ್ದು, ವೈದ್ಯರು ಪೇಯ್ನ್‌ ಕಿಲ್ಲರ್‌ ಇಂಜೆಕ್ಷನ್‌ ನೀಡಿದ್ದರು.  ಅದಾದ ಮೇಲೆ ಮಗು ಅಳುವುದನ್ನ ನಿಲ್ಲಿಸಿದ್ದಲ್ಲದೆ, ಯಾವುದೇ ಚಲನೆ ಕಂಡು ಬರಲಿಲ್ಲ. ಕೂಡಲೆ ಮಗುವನ್ನು ಐಸಿಯುನಲ್ಲಿಡಲಾಗಿದ್ದು, ಒಂದು ಗಂಟೆ ಬಳಿಕ ಮೆಡಿಸಿನ್‌ ರಿಯಾಕ್ಷನ್‌ನಿಂದ ಮಗು ಮೃತಪಟ್ಟಿರುವುದಾಗಿ ಆಸ್ಪತ್ರೆ ಸಿಬ್ಬಂದಿ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಪೋಷಕರ ಆಕ್ರಂದನ ಮುಗಿಲುಮುಟ್ಟಿದ್ದು, ವೈದ್ಯರು ಹಾಗೂ ಆಸ್ಪತ್ರೆ ವಿರುದ್ದ ದೂರು ದಾಖಲಿಸಿದ್ದಾರೆ.

Leave a Reply

Your email address will not be published.