ಟೀಮ್ ಇಂಡಿಯಾಗೆ ಕಮ್‍ಬ್ಯಾಕ್ ಮಾಡ್ತಾರಾ Yuvraj..? : Sehwag ಹೇಳಿದ್ದೇನು..?

ಯುವರಾಜ್ ಸಿಂಗ್, ಭಾರತ ಕಂಡ ಶ್ರೇಷ್ಟ ಕ್ರಿಕೆಟ್ ಆಟಗಾರರಲ್ಲಿ ಒಬ್ಬರು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಫಿಟ್ನೆಸ್ ಕೊರತೆ ಹಾಗೂ ಕಳಪೆ ಫಾರ್ಮ್ ಸಮಸ್ಯೆಯಿಂದ ಯುವಿ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದಾರೆ. ಮತ್ತೆ ಯುವರಾಜ್ ಭಾರತ ತಂಡಕ್ಕೆ ಮರಳಬಹುದೇ..? ಈ ಬಗ್ಗೆ ಸ್ಫೋಟಕ ಬ್ಯಾಟ್ಸಮನ್  ವೀರೆಂದ್ರ ಸೆಹ್ವಾಗ್ ಪ್ರತಿಕ್ರಿಯೆ ನೀಡಿದ್ದಾರೆ.

ಶುಕ್ರವಾರ ಕಾರ್ಯಕ್ರಮವೊಂದರಲ್ಲಿ ಯುವಿ ಬಗ್ಗೆ ಮಾತನಾಡಿರುವ ಸೆಹ್ವಾಗ್ ‘ ಅದು ಆಯ್ಕೆಗಾರರನ್ನು ಅವಲಂಬಿಸಿದೆ. ದೇಶಿ ಕ್ರಿಕೆಟ್ ನಲ್ಲಿ ಯುವಿ ಉತ್ತಮ ಪ್ರದರ್ಶನ ತೋರಿದರೆ, ಫಿಟ್ನೆಸ್ ಟೆಸ್ಟ್ ನಲ್ಲಿ ಪಾಸಾದರೆ, ಕಮ್ ಬ್ಯಾಕ್ ಸಾಧ್ಯವಿದೆ. ಆಶಿಶ್ ನೆಹ್ರಾ 36ನೇ ವಯಸ್ಸಿನಲ್ಲಿ ಕಮ್ ಬ್ಯಾಕ್ ಮಾಡಬಹುದಾದರೆ ಯುವಿ ಏಕೆ ಮಾಡಬಾರದು ‘ ಎಂದಿದ್ದಾರೆ.

Related image

‘ ಸದ್ಯ ಭಾರತ ತಂಡದಲ್ಲಿ ಇಲ್ಲವಾದರೂ ಯುವರಾಜ್ ಸಿಂಗ್ ಒಬ್ಬ ಅದ್ಭುತ ಆಟಗಾರ, ಪ್ರತಿಭೆ ಈಗಲೂ ಅವರಲ್ಲಿದೆ. ಉತ್ತಮ ಫಾರ್ಮ್ ನಲ್ಲಿದ್ದರೆ ಯುವಿ ಖಂಡಿತ ಒಬ್ಬ ಮ್ಯಾಚ್ ವಿನ್ನರ್ ಎಂಬುದರಲ್ಲಿ ಅನುಮಾನವಿಲ್ಲ ‘ ಎಂದು ಹೇಳಿದ್ದಾರೆ.

Leave a Reply

Your email address will not be published.