Cricket : ಅಂಧರ ವಿಶ್ವಕಪ್ : ಪಾಕ್ ವಿರುದ್ಧ ರೋಚಕ ಜಯ, ಭಾರತ ಚಾಂಪಿಯನ್

ಶನಿವಾರ ಶಾರ್ಜಾದಲ್ಲಿ ನಡೆದ ಅಂಧರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು 2 ವಿಕೆಟ್ ಗಳಿಂದ ಮಣಿಸಿದ ಭಾರತ ತಂಡ ವಿಶ್ವಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಮೂಲಕ ಭಾರತ ಎರಡನೇ ಬಾರಿಗೆ ಅಂಧರ ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿದ ಸಾಧನೆ ಮಾಡಿದೆ.

ಟಾಸ್ ಗೆದ್ದ ಭಾರತ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಲಿಳಿದ ಪಾಕಿಸ್ತಾನ ತಂಡ ನಿಗದಿತ 40 ಓವರುಗಳಲ್ಲಿ 8 ವಿಕೆಟ್ ಕಳೆದುಕೊಂಡು 308 ರನ್ ಬೃಹತ್ ಮೊತ್ತ ಕಲೆಹಾಕಿತು.

ಗುರಿಯನ್ನು ಬೆನ್ನತ್ತಿದ ಭಾರತ  38.2 ಓವರುಗಳಲ್ಲಿ 8 ವಿಕೆಟ್ ನಷ್ಟಕ್ಕೆ 309 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಭಾರತದ ಪರವಾಗಿ ಸುನಿಲ್ ರಮೇಶ್ 93 ಹಾಗೂ ನಾಯಕ ಅಜಯ್ ರೆಡ್ಡಿ 63 ರನ್ ಬಾರಿಸಿದರು. ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸೋಲಿಸಿ ಭಾರತ ಫೈನಲ್ ತಲುಪಿತ್ತು.

Leave a Reply

Your email address will not be published.