Bihar : ಗಯಾದ ಮಹಾಬೋಧಿ ಮಂದಿರದ ಬಳಿ ಎರಡು ಕಚ್ಚಾ ಬಾಂಬ್ ಪತ್ತೆ..!

ಬೌದ್ಧ ಧರ್ಮದ ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿರುವ ಬಿಹಾರದ ಬೋಧಗಯಾದಲ್ಲಿ ಎರಡು ಕಚ್ಚಾ ಬಾಂಬ್ ಗಳು ಪತ್ತೆಯಾಗಿವೆ. ಮಹಾಬೋಧಿ ಮಂದಿರದ ಹೊರ ಆವರಣದಲ್ಲಿ ಎರಡು ಕಚ್ಚಾ ಬಾಂಬ್ ಗಳನ್ನು ಸ್ಥಳೀಯ ಪೋಲೀಸರು ಪತ್ತೆ ಹಚ್ಚಿದ್ದಾರೆ.

Image result for bodh gaya bomb crude

ಟಿಬೆಟಿಯನ್ ಧಾರ್ಮಿಕ ಗುರು ದಲಾಯಿ ಲಾಮಾ ಬೋಧಗಯಾ ಭೇಟಿ ನೀಡಿ ಮರಳಿದ ಕೆಲವೇ ಗಂಟೆಗಳ ನಂತರ ಬಾಂಬ್ ಪತ್ತೆಯಾಗಿವೆ. ಮಹಾಬೋಧಿ ಮಂದಿರದ ಹತ್ತಿರದ ಮೈದಾನದಲ್ಲಿ ಲಘು ಪ್ರಮಾಣದ ಬಾಂಬ್ ಸ್ಫೋಟ ಸಂಭವಿಸಿತ್ತು. ಘಟನೆಯ ಬಳಿಕ ಸುತ್ತಲಿನ ಪ್ರದೇಶದಲ್ಲಿ ಪೋಲೀಸರು ಶೋಧ ಕಾರ್ಯ ನಡೆಸಿದ್ದರು. ಇದೇ ವೇಳೆ ಬಾಂಬ್ ಪತ್ತೆಯಾಗಿದ್ದು, ಸ್ಥಳದಲ್ಲಿನ ಸುರಕ್ಷತೆಯನ್ನು ಹೆಚ್ಚಿಸಲಾಗಿದೆ.

Image result for bodh gaya bomb crude lama

ಗೌತಮ ಬುದ್ಧನಿಗೆ ಜ್ಞಾನೋದಯವಾದ ಸ್ಥಳವೆಂದು ಖ್ಯಾತಿ ಪಡೆದಿರುವ ಈ ಕ್ಷೇತ್ರ ಉಗ್ರರ ಟಾರ್ಗೆಟ್ ಆಗಿರುವುದು ಇದೇ ಮೊದಲಲ್ಲ. 2013 ಜುಲೈನಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟದಲ್ಲಿ ಹಲವಾರು ಜನರು ಗಾಯಗೊಂಡಿದ್ದರು.

 

Leave a Reply

Your email address will not be published.