BIGG BOSS SHOCKING : ಗೆಲ್ಲಲೇ ಬೇಕಿದ್ದ ಇಬ್ಬರು ಸ್ಪರ್ಧಿಗಳು ಹೊರಕ್ಕೆ …?!!

ಈ ವಾರ ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ನಡೆದಿದೆ. ಕಳೆದ 98 ದಿನಗಳಿಂದ ಜನರನ್ನು ರಂಜಿಸಿಕೊಂಡು ಬಂದಿದ್ದು ಇಬ್ಬರು ಆ್ಯಕ್ಟಿವ್‌ ಮಂದಿ ಸ್ಪರ್ಧೆಯಿಂದ ಔಟಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿಗ್‌ ಬಾಸ್‌ ರಿಯಾಲಿಟಿ ಶೋ ಕೊನೆಯ ಹಂತ ತಲುಪಿದೆ. ಫಿನಾಲೆಗೆ ಇನ್ನೊಂದು ವಾರ ಬಾಕಿ ಇರುವಾಗಲೇ ಮನೆಯ ಟಾಪ್‌ 5 ಫೈನಲಿಸ್ಟ್‌ಗಳನ್ನು ಸೆಲೆಕ್ಟ್‌ ಮಾಡುವ ನಿಟ್ಟಿನಲ್ಲಿ 7 ಜನರಿದ್ದ ಮನೆಯಲ್ಲಿ ಇಂದು ಇಬ್ಬರನ್ನು ಎಲಿಮಿನೇಟ್ ಮಾಡಲಾಗಿದೆಯಂತೆ.

ಇಬ್ಬರು ಸ್ಟ್ರಾಂಗ್ ಸ್ಪರ್ಧಿಗಳೇ ಮನೆಯಿಂದ ಹೊರಬಿದ್ದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಒಂದು ಮೂಲದ ಪ್ರಕಾರ ಅನುಪಮಾ ಹಾಗೂ ನಿವೇದಿತಾ ಮನೆಯಿಂದ ಹೊರಬಂದಿದ್ದರೆ, ಮತ್ತೊಂದು ಮೂಲದ ಪ್ರಕಾರ ಅನುಪಮಾ ಹಾಗೂ ಶೃುತಿ ಮನೆಯಿಂದ ಆಚೆ ಬಂದಿದ್ದಾರೆ ಎನ್ನಲಾಗುತ್ತಿದೆ.

ಅವರು ಮೂವರಲ್ಲಿ ಯಾರು ಮನೆಯಿಂದ ಹೊರಹೋಗುತ್ತಾರೆ ಎಂಬುದು ಮಾತ್ರ ಇಂದಿನ ಸಂಚಿಕೆಯಲ್ಲಿ ಬಯಲಾಗಲಿದೆ. ಇಬ್ಬರು ಹೊರಗೆ ಹೋದರೆ ಟಾಪ್  5 ಸ್ಪರ್ಧಿಗಳಾಗಿ ಚಂದನ್‌, ಜೆ.ಕೆ, ಸಮೀರಾಚಾರ್ಯ, ದಿವಾಕರ್‌, ನಿವೇದಿತಾ ಅಥವಾ, ಶೃುತಿ ಆಗಲಿದ್ದಾರೆ.

ಇನ್ನು ಈಗಾಗಲೆ ಸೋಶಿಯಲ್‌ ಮೀಡಿಯಾಗಳಲ್ಲಿ ಬಿಗ್‌ಬಾಸ್‌ ವಿನ್ನರ್‌ ಬಗ್ಗೆ ಚರ್ಚೆ ಶುರುವಾಗಿದೆ.

 

Leave a Reply

Your email address will not be published.

Social Media Auto Publish Powered By : XYZScripts.com