ಕನ್ನಡ ಮಾತಾಡು ಎಂದಿದ್ದಕ್ಕೆ ಕನ್ನಡಿಗನ ಮೇಲೆ ಅಸ್ಸಾಂ ಯುವಕರಿಂದ ಹಲ್ಲೆ

ಬೆಂಗಳೂರು : ಕನ್ನಡದಲ್ಲಿ ಮಾತನಾಡು ಎಂದಿದ್ದಕ್ಕೆ ಅಸ್ಸಾಂ ಮೂಲದ ಯುವಕರು ಕ್ಯಾಬ್‌ ಚಾಲಕನ ಮೇಲೆ ಹಲ್ಲೆ ಮಾಡಿರುವ ಘಟನೆ ವರ್ತೂರು ಬಳಿ ನಡೆದಿದೆ. ಅಸ್ಸಾಂ ಮೂಲದ ಗುಂಪೊಂದು ಕ್ಯಾಬ್ ಚಾಲಕ ಮನು ಎಂಬುವವರ ಮೇಲೆ ಹಲ್ಲೆ ಮಾಡಿದ್ದಾರೆ.

ಸ್ಕೂಲ್‌ ಬಸ್ಸೊಂದು ಕ್ಯಾಬ್‌ಗೆ ಡಿಕ್ಕಿ ಹೊಡೆದಿತ್ತು. ಇದನ್ನು ಮನು ಪ್ರಶ್ನಿಸಿದ್ದರು. ಅಲ್ಲದೆ ಡಿಕ್ಕಿ ಹೊಡೆದ ತಪ್ಪಿಗೆ ಹಣ ನೀಡುತ್ತೇನೆ ಎಂಬ ಬಸ್‌ ಡ್ರೈವರ್ ಮನು ಅವರನ್ನು  ಅಸ್ಸಾಂ ಹುಡುಗರು ಇದ್ದ ಕಾಲೋನಿಗೆ ಕರೆದೊಯ್ದಿದ್ದರು. ಆ ವೇಳೆ ಯುವಕರು ಹಿಂದಿಯಲ್ಲಿ ಮಾತನಾಡುತ್ತಿದ್ದರು. ಆದರೆ ಮನುಗೆ ಹಿಂದಿ ಬರದ ಕಾರಣ ಕನ್ನಡದಲ್ಲಿ ಮಾತನಾಡು ಎಂದಿದ್ದಾರೆ. ಇದಕ್ಕೆ ಸಿಟ್ಟಿಗೆದ್ದ ಯುವಕರು ಮನು ಮೇಲೆ ಹಲ್ಲೆ ನಡೆಸಿದ್ದಾರೆ. ವರ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com