Kohli ಪಡೆಯ ಸರಣಿ ಸೋಲಿನ ಬಗ್ಗೆ ಧೋನಿ ಪ್ರತಿಕ್ರಿಯೆ : MSD ಹೇಳಿದ್ದೇನು..?

ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯನ್ನು ಭಾರತ 2-0 ಅಂತರದಿಂದ ಸೋತಿದೆ. ಕೇಪ್ ಟೌನ್ ಹಾಗೂ ಸೆಂಚುರಿಯನ್ ಟೆಸ್ಟ್ ಗಳಲ್ಲಿ ಕೊಹ್ಲಿ ಪಡೆ ಮುಖಭಂಗ ಅನುಭವಿಸಿತ್ತು. ಈ ಸರಣಿ ಸೋಲಿನ ಬಳಿಕ ಮಾಜಿ ನಾಯಕ ಎಮ್ ಎಸ್ ಧೋನಿ ಮಾಧ್ಯಮಗಳೆದುರು ಪ್ರತಿಕ್ರಿಯೆ ನೀಡಿದ್ದಾರೆ.

ಕೊಹ್ಲಿ ಪಡೆಯ ಸರಣಿ ಸೋಲಿನ ಬಗ್ಗೆ ಪ್ರತಿಕ್ರಿಯೆ ನೀಡಲು ಕೇಳಿದಾಗ ಧೋನಿ, ‘ ಸೋಲಿನ ಬಗ್ಗೆ ನಾನು ಉತ್ತರಿಸಲು ಬಯಸುವುದಿಲ್ಲ. ಆದರೆ ಸರಣಿಯಲ್ಲಿನ ಸಕಾರಾತ್ಮಕ ಅಂಶಗಳತ್ತ ಗಮನ ಕೊಡಿ ಎಂದು ಮಾತ್ರ ಹೇಳಬಲ್ಲೆ. ಒಂದು ಟೆಸ್ಟ್ ಪಂದ್ಯವನ್ನು ಗೆಲ್ಲಲು ಎದುರಾಳಿ ತಂಡದ 20 ವಿಕೆಟ್ ಪಡೆಯುವ ಅಗತ್ಯವಿರುತ್ತದೆ. ಎರಡೂ ಟೆಸ್ಟ್ ಗಳಲ್ಲಿ ನಾವು ಆಫ್ರಿಕಾ ತಂಡದ 20 ವಿಕೆಟ್ ಪಡೆಯುವಲ್ಲಿ ಸಫಲವಾಗಿದ್ದೇವೆ. ಅದು ದೊಡ್ಡ ಪ್ಲಸ್ ಪಾಯಿಂಟ್ ‘

‘ ಸ್ವದೇಶದಲ್ಲೇ ಆಗಲಿ, ವಿದೇಶದಲ್ಲೇ ಆಗಲಿ 20 ವಿಕೆಟ್ ಬೀಳಿಸದೆ ಟೆಸ್ಟ್ ಮ್ಯಾಚನ್ನು ಗೆಲ್ಲಲು ಸಾಧ್ಯವಿಲ್ಲ. ಅದರಲ್ಲಿ ನಾವು ಯಶಸ್ವಿಯಾಗಿದ್ದೇವೆ. ಬ್ಯಾಟಿಂಗ್ ನಲ್ಲಿ ಉತ್ತಮ ರನ್ ಸ್ಕೋರ್ ಮಾಡಿದರೆ ಗೆಲ್ಲಬಹುದು ‘ ಎಂದು ಹೇಳಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com