Uttar Pradesh : ವರದಕ್ಷಿಣೆ ನೀಡದ್ದಕ್ಕೆ ಪತ್ನಿಗೆ ‘ತಲಾಖ್’ ನೀಡಿ ಮಹಡಿಯಿಂದ ತಳ್ಳಿದ ಪತಿ..!

ಪತಿಯೊಬ್ಬ ತನ್ನ ಪತ್ನಿಗೆ ತ್ರಿವಳಿ ತಲಾಖ್ ನೀಡಿ ಮನೆಯ ಮಹಡಿಯಿಂದ ಕೆಳಕ್ಕೆ ತಳ್ಳಿದ ದಾರುಣ ಘಟನೆ ಉತ್ತರಪ್ರದೇಶದ ಹಾಪುರ್ ಜಿಲ್ಲೆಯ ಮುಜಫ್ಫರ್ ನಗರದಲ್ಲಿ ನಡೆದಿದೆ. ಹೆಂಡತಿಯ ತವರು ಮನೆಯವರು ತಾನು ಕೇಳಿದ್ದಷ್ಟು ವರದಕ್ಷಿಣೆಯನ್ನು ನೀಡಲಿಲ್ಲವೆಂಬ ಕಾರಣಕ್ಕೆ ಶಮ್ ಮಹಮ್ಮದ್ ಎಂಬಾತ ಹೀಗೆ ಮಾಡಿದ್ದಾನೆ.

ಜನೆವರಿ 15ನೇ ತಾರೀಖಿನಂದು ಮುಜಫ್ಫರ್ ನಗರದ ಗುರಮುಕ್ತೇಶ್ವರ ಪ್ರದೇಶದಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಜಾರಿಯಲ್ಲಿದೆ. ಆಕೆಯ ಮೈತುಂಬ ಹಲವು ಗಾಯಗಳಾಗಿದ್ದು, ದೇಹದ ಕೆಲವು ಮೂಳೆಗಳು ಮುರಿತಕ್ಕೊಳಗಾಗಿವೆ.

‘ ಆರೋಪಿ ಶಮ್ ಮಹಮ್ಮದ್ ಹಾಗೂ ಆತನ ಸಂಬಂಧಿಕರ ಮೇಲೆ ಸ್ಥಳೀಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಸಲಾಗಿದೆ. ಆದರೆ ಆಕೆಯ ಪತಿ ನಾಪತ್ತೆಯಾಗಿದ್ದಾನೆ ‘ ಎಂದು ಹಿರಿಯ ಪೋಲೀಸ್ ಅಧಿಕಾರಿ ಮೀನಾಕ್ಷಿ ಶರ್ಮಾ ತಿಳಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com