ಅಶ್ಲೀಲ ವಿಡಿಯೋ ತೋರಿಸಿ ಬಾಲಕಿ ಮೇಲೆ ಅತ್ಯಾಚಾರವೆಗಿದ ಮೌಲ್ವಿ….ಮುಂದೇನಾಯ್ತು ?

ಮುಂಬೈ : ಮೌಲ್ವಿಯೊಬ್ಬ ತನ್ನ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೊಗಳನ್ನು ತೋರಿಸಿ 12 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗುತ್ತಿದ್ದ ವಿಚಾರ ಮಹರಾಷ್ಟ್ರದಲ್ಲಿ ಬೆಳಕಿಗೆ ಬಂದಿದೆ.

ಆರೋಪಿಯನ್ನು ಮಜಲ್‌ಗಾಂವ್‌ನ ಮೌಲ್ವಿ ಸಬೆರ್‌ ಫರೂಕಿ ಎಂದು ತಿಳಿದುಬಂದಿದ್ದು. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಆತ ಪರಾರಿಯಾಗಿದ್ದಾನೆ. ಆರೋಪಿ ವಿರುದ್ದ ದೂರು ನೀಡದಂತೆ ಅದೇ ಗ್ರಾಮದ ರಾಜಕಾರಣಿಗಳು ಸಂತ್ರಸ್ತೆಯ ತಾಯಿಗೆ ಒತ್ತಾಯಿಸಿದ್ದಾರೆ. ಅಲ್ಲದೆ ಮೌಲ್ವಿ ಸಹ ಬಾಲಕಿಯ ತಾಯಿಯ ಬಳಿ ಬಂದು ರಾಜಿ ಮಾಡಿಕೊಳ್ಳುವ ಮಾತನಾಡಿದ್ದ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪ್ರಕರಣ ಸಂಬಂಧ ರಾಜಕಾರಣಿಗಳಾದ ಖಲೀಲ್‌ ಪಟೇಲ್‌, ನವಾಬ್‌ ಪಟೇಲ್‌ ಹಾಗೂ ಐಬ್ರಿಶ್‌ ಬಗ್ವಾನ್‌ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ತನ್ನ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೊಗಳನ್ನು 12 ವರ್ಷದ ಬಾಲಕಿಗೆ ತೋರಿಸಿ ಬಳಿಕ ಅತ್ಯಾಚಾರ ಎಸಗಿದ್ದಾನೆ. ಅಲ್ಲದೆ 8 ವರ್ಷದ ಬಾಲಕಿಗೂ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ.

ಮದರಸಾದಲ್ಲಿ ಈತನಿಗೆ ಸಂಬಂಧಪಟ್ಟ ದಾಖಲೆಗಳನ್ನ ಪೊಲೀಸರು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

 

 

Leave a Reply

Your email address will not be published.