ಹೆತ್ತಮ್ಮನೇ ಮಗನನ್ನು ಸಾಯಿಸಿದ್ಲು, ತುಂಡು ಮಾಡಿ ಬಾಳೆತೋಟದಲ್ಲಿ ಸುಟ್ಟು ಬಿಟ್ಲು….!!

ತಿರುವನಂತಪುರ : ಹೆತ್ತ ತಾಯಿಯೇ ತನ್ನ ಮಗನನ್ನು ತುಂಡು ತುಂಡಾಗಿ ಕತ್ತರಿಸಿ ಸುಟ್ಟು ಕೊಂದಿರುವ ಘಟನೆ ಕೇರಳದ ಕೊಲ್ಲಂ ಪ್ರದೇಶದಲ್ಲಿ ನಡೆದಿದೆ. ಆರೋಪಿ ತಾಯಿಯನ್ನು 45 ವರ್ಷದ ಜಯಮೋಲ್‌ ಎಂದು ತಿಳಿದುಬಂದಿದೆ. 14 ವರ್ಷದ ಜೇತುಜಾಬ್‌ ಕೊಲೆಯಾದ ದುರ್ದೈವಿ.

ಕ್ಷುಲ್ಲಕ ಕಾರಣಕ್ಕೆ ಮಗ ತಾಯಿಯನ್ನು ಪೀಡಿಸಿದ್ದಾನೆ. ಇದರಿಂದ ಸಿಟ್ಟಿಗೆದ್ ತಾಯಿ ಮಗನನ್ನು ಅಡುಗೆ ಮನೆಗೆ ತಳ್ಳಿ ಶಲ್ಯದಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾಳೆ. ಬಳಿಕ ತನ್ನ ಕೃತ್ಯವನ್ನು ಮರೆಮಾಚಲು ದೇಹವನ್ನು ಕತ್ತರಿಸಿ ಬಾಳೆ ತೋಟದಲ್ಲಿ ಸುಟ್ಟು ಹಾಕಿದ್ದಾಳೆ.

ಜೊತೆಗೆ ತನ್ ಮಗ ನಾಪತ್ತೆಯಾಗಿದ್ದಾನೆಂದು ಪೊಲೀಸರಿಗೆ ದೂರನ್ನೂ ನೀಡಿದ್ದಾಳೆ. ದೂರು ದಾಖಲಿಸಿಕೊಂಡ ಪೊಲೀಸರು ಜೀತು ಪತ್ತೆಗಾಗಿ ಶೋದ ಕಾರ್ಯ ನಡೆಸುವ ವೇಳೆ ಬಾಳೆತೋಟದಲ್ಲಿ ಅರೆಬೆಂದ ಬಾಲಕನ ದೇಹ ಪತ್ತೆಯಾಗಿದೆ.

ಬಾಲಕನನ್ನು ಸುಡುವ ವೇಳೆ ತಾಯಿಯ ಕೈ ಸಹ ಸುಟ್ಟಿದ್ದ ಹಿನ್ನೆಲೆಯಲ್ಲಿ ಅನುಮಾನಗೊಂಡ ಪೊಲೀಸರು ಆಕೆಯನ್ನ ವಿಚಾರಿಸಿದ್ದಾರೆ. ಆಗ ತಾಯಿ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾಳೆ.ಅಲ್ಲದೆ ನನ್ನ ಹೆಂಡತಿ ಮಾನಸಿಕ ಅಸ್ವಸ್ಥೆ ಎಂದು ಮಹಿಳೆಯ ಪತಿ ಹೇಳಿದ್ದಾರೆ.

ಬಾಲಕನ ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published.