5 ಬಾರಿ ಸಂಸದರಾಗಿರುವ ನೀವು ಉತ್ತರ ಕನ್ನಡ ಜಿಲ್ಲೆಗೆ ನೀಡಿದ್ದೇನು ಹೆಗಡೆಯವರೇ….: HDK

ಕಲಬುರಗಿ : ಜನಸಾಮಾನ್ಯರ ಕೆಲಸ ಮಾಡದ ಜನಪ್ರತಿನಿಧಿಗಳು ನಾಲಾಯಕ್ ಎಂಬ ಸಚಿವ ಅನಂತ್‌ ಕುಮಾರ್‌ ಹೆಗಡೆ ಅವರ ಹೇಳಿಕೆಗೆ ಮಾಜಿ ಸಿಎಂ ಎಚ್‌.ಡಿ ಕುಮಾರ ಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ತಾವೂ ಒಬ್ಬರು ಜನಪ್ರನಿಧಿ ಎನ್ನುವುದನ್ನು ಮರೆಯಬಾರದು. ಅಂದರೆ ನೀವೂ ನಾಲಾಯಕ್‌ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಐದಾರು ಬಾರಿ ಸಂಸದರಾಗಿರುವ ನೀವು ಉತ್ತರಕನ್ನಡ ಜಿಲ್ಲೆಗೆ ನೀಡಿದ್ದೇನು ಎಂದು ಪ್ರಶ್ನಿಸಿರುವ ಎಚ್‌ಡಿಕೆ, ಉತ್ತರ ಕನ್ನಡದಲ್ಲಿ ಒಂದೂ ಫ್ಯಾಕ್ಟರಿ ಆರಂಭಿಸಿಲ್ಲ. ಇದ್ದ ಫ್ಯಾಕ್ಟರಿಗಳನ್ನು ಬಂದ್ ಮಾಡಿದ್ದಾರೆ. ಇದು ನೀವೂ ಒಬ್ಬರು ನಾಲಾಯಕ್ ಎನ್ನೋದನ್ನು ತೋರಿಸಿಕೊಡುತ್ತದೆ ಎಂದಿದ್ದಾರೆ.

ಇದೇ ವೇಳೆ ಜೆಡಿಎಸ್‌ನ ಇಬ್ಬರು ಶಾಸಕರು ರಾಜೀನಾಮೆ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಎಚ್‌ಡಿಕೆ, ಅವರು ಪಕ್ಷ ಬಿಡುತ್ತಾರೆ ಎಂದು ಎರಡು ವರ್ಷದ ಹಿಂದೆ ತಿಳಿದಿತ್ತು. ಇಬ್ಬರು ಶಾಸಕರು ಎರಡು ದೋಣಿಗಳಲ್ಲಿ ಒಂದು ಕಾಲಿಟ್ಟು ಎರಡು ವರ್ಷ ಆಗಿದೆ. ಬಿಜೆಪಿ ಸೇರ್ಪಡೆಯಿಂದ ಪಕ್ಷಕ್ಕೆ ಆನೆ ಬಲ ಬಂದಿದೆ ಎಂದು ಬಿಎಸ್‌ವೈ ಹೇಳುತ್ತಾರೆ.  ಇದುವರೆಗೆ ಇಬ್ಬರು ಶಾಸಕರು ಪಕ್ಷದ ಯಾವುದೇ  ಚಟುವಟಿಕೆಗಳಲ್ಲಿ ಭಾಗವಹಿಸಿಲ್ಲ. ಅದಕ್ಕಾಗಿಯೇ ರಾಯಚೂರಿನ ಜನತೆ ಅವರ ವಿರುದ್ದ ಪ್ರತಿಭಟನೆ ಮಾಡುವರಿದ್ದಾರೆ. ಬಿಜೆಪಿಗೆ ಬೇರೆ ಪಕ್ಷದವರನ್ನ ಸೆಳೆಯುವುದೇ ಆಯಿತು. ಇದರ ಮೇಲೆ ಗೋತ್ತಾಗುತ್ತೆ ರಾಜ್ಯದಲ್ಲಿ ಬಿಜೆಪಿಯ ವರ್ಚಸ್ಸು ಎಂತಹದು ಅಂತ ಎಂದು ಟೀಕೆ ಮಾಡಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com