Cricket : ಒಂದೇ ಓವರ್ ನಲ್ಲಿ 37 ರನ್ ಬಾರಿಸಿದ JP Duminy..!

ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಜೆಪಿ ಡುಮಿನಿ ಒಂದೇ ಓವರಿನಲ್ಲಿ 37 ರನ್ ಬಾರಿಸಿದ ದಾಖಲೆ ಮಾಡಿದ್ದಾರೆ. ಬುಧವಾರ ನಡೆದ ಮೊಮೆಂಟಮ್ ಓನ್ ಡೇ ಕಪ್ ಟೂರ್ನಿಯ ಕೇಪ್ ಕೋಬ್ರಾ ಹಾಗೂ ನೈಟ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಎಡ್ಡಿ ಲೀ ಅವರು ಎಸೆದ ಓವರಿನಲ್ಲಿ ಜೆಪಿ ಈ ಸಾಧನೆ ಮಾಡಿದ್ದಾರೆ. ಈ ಮೂಲಕ ಡುಮಿನಿ, ಸೌತ್ ಆಫ್ರಿಕಾದ ‘ಲಿಸ್ಟ್ A’ ಪಂದ್ಯಗಳಲ್ಲಿ ಒಂದೇ ಓವರಿನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ದಾಖಲೆಯನ್ನು ನಿರ್ಮಿಸಿದ್ದಾರೆ.

Image result for jp duminy 37

ಎಡ್ಡೀ ಅವರು ಎಸೆದ ಓವರಿನ ಮೊದಲ ನಾಲ್ಕು ಎಸೆತಗಳನ್ನು ಜೆಪಿ ಡುಮಿನಿ ಸಿಕ್ಸರ್ ಬಾರಿಸಿದರು. 5ನೇ ಎಸೆತದಲ್ಲಿ ಕೇವಲ 2 ರನ್ ಮಾತ್ರ ಬಂದವು. 6ನೇ ಎಸೆತವನ್ನು ಎಡ್ಡೀ ಲೀ ನೋ ಬಾಲ್ ಮಾಡಿದರು, ಇದನ್ನು ಜೆಪಿ ಎಕ್ಸ್ಟ್ರಾ ಕವರ್ ಕ್ಷೇತ್ರದಲ್ಲಿ ಬೌಂಡರಿಗಟ್ಟಿದರು. 7 ಎಸೆತವನ್ನು ಮತ್ತೆ ಸಿಕ್ಸರ್ ಸಿಡಿಸಿದ ಡುಮಿನಿ 37 ರನ್ ಬಾರಿಸಿದ ದಾಖಲೆ ಬರೆದರು. ಓವರ್ ರನ್ ಗಳಿಕೆ ಈ ರೀತಿ ಇತ್ತು. 6, 6, 6, 6 2, 5nb, 6..

 

 

Leave a Reply

Your email address will not be published.

Social Media Auto Publish Powered By : XYZScripts.com