ನನ್ನನ್ನು ಮಂಚಕ್ಕೆ ಕರೆದಿದ್ದರು : ಚಿತ್ರರಂಗದ ಕಾಮಪುರಾಣ ಬಿಚ್ಚಿಟ್ಟ ಶೃುತಿ ಹರಿಹರನ್‌

ಹೈದರಾಬಾದ್‌ : ಖ್ಯಾತ ನಟಿ ಶೃುತಿ ಹರಿಹರನ್‌ ಅವರು ಕನ್ನಡ ಚಿತ್ರರಂಗದ ಕಾಮಪುರಾಣವನ್ನ ಬಿಚ್ಚಿಟ್ಟಿದ್ದು, ನನ್ನನ್ನು ಐವರು ನಿರ್ಮಾಪಕರು ಮಂಚಕ್ಕೆ ಕರೆದಿದ್ದರು ಎಂಬ ಶಾಕಿಂಗ್‌ ಸತ್ಯವನ್ನು ಬಹಿರಂಗಪಡಿಸಿದ್ದಾರೆ.
ಹೈದರಾಬಾದ್‌ನಲ್ಲಿ ನಡೆದ ಇಂಡಿಯಾ ಟುಡೇ ವಾಹಿನಿ ಕಾನ್‌ ಕ್ಲೇವ್‌ ಸೌಥ್-2018 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮಿಳಿನ ನಿರ್ಮಾಪಕರೊಬ್ಬರು ನನಗೆ ಲೈಂಗಿಕ ಕಿರುಕುಳ ನೀಡಿದ್ದರು. ನನ್ನ 18ನೇ ವಯಸ್ಸಿನಲ್ಲೇ ಲೈಂಗಿಕ ಕಿರುಕುಳ ಅನುಭವಿಸಿದ್ದೆ. ಆಗ ನಾನಿನ್ನೂ ಡಾನ್ಸರ್‌ ಆಗಿದ್ದೆ. ನಾನು ಕನ್ನಡ ಚಿತ್ರ ಮಾಡುವ ಸಲುವಾಗಿ ಪ್ರಯತ್ನಿಸುತ್ತಿರುವಾಗ ನಿರ್ಮಾಪಕರೊಬ್ಬರು ನನ್ನ ಜೊತೆ ಮಲಗು ಬಾ ಎಂದಿದ್ದರು. ಆಗ ಗಾಬರಿಯಾಗಿ ಕಣ್ಣೀರು ಹಾಕಿದ್ದೆ. ಏನು ಮಾಡಬೇಕು ಎಂದು ತೋಚದೆ ನೃತ್ಯ ನಿರ್ದೇಶಕರ ಬಳಿ ಹೇಳಿದಾಗ ಅವರು, ಇಂತಹ ವಿಚಾರಗಳನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ನೀನು ಕಲಿಯಬೇಕು. ಇಲ್ಲದಿದ್ದರೆ ಚಿತ್ರರಂಗಕ್ಕೆ ಕಾಲಿಡುವ ಪ್ರಯತ್ನವನ್ನು ಬಿಡು ಎಂದಿದ್ದರು. ಇದನ್ನು ಕೇಳಿ ಅಳುತ್ತಾ ಮನೆಗೆ ಬಂದಿದ್ದೆ ಎಂದಿದ್ದಾರೆ.
ಬಳಿಕ ನನ್ನ ಕನ್ನಡ ಸಿನಿಮಾವನ್ನು ತಮಿಳಿನಲ್ಲಿ ರೀಮೇಕ್‌ ಮಾಡಲಿದ್ದ ನಿರ್ಮಾಪಕನೊಬ್ಬ ನನಗೆ ಕರೆ ಮಾಡಿ ಅದೇ ಪಾತ್ರವನ್ನು ನಮ್ಮ ಚಿತ್ರದಲ್ಲಿಯೂ ನೀವೇ ಮಾಡಿ. ಆದರೆ ನಾವು ಐದು ಜನರಿದ್ದೇವೆ ಅಡ್ಜಸ್ಟ್‌ ಮಾಡಿಕೋ ಎಂದಿದ್ದರು. ತಕ್ಷಣ ನಾನು ಚಪ್ಪಲಿ ತಗೋತೀನಿ ಎಂದಿದ್ದೆ. ಚಿತ್ರರಂಗದಲ್ಲಿ ಹೆಣ್ಣು ಮಾರಾಟದ ವಸ್ತುವಾಗಿದ್ದಾಳೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com