Cricket : Pak ಅಭಿಮಾನಿಗಳು ಧವನ್‍ಗೆ Thanks ಹೇಳಿದ್ದೇಕೆ..?

ಟೀಮ್ ಇಂಡಿಯಾದ ಆರಂಭಿಕ ಬ್ಯಾಟ್ಸಮನ್ ಶಿಖರ್ ಧವನ್‍ಗೆ ನೆರೆರಾಷ್ಟ್ರ ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳು ಧನ್ಯವಾದ ಹೇಳಿದ್ದಾರೆ. ಶಿಖರ್ ಧವನ್ ಗುರುವಾರ ಮಾಡಿದ ಟ್ವೀಟ್ ಪಾಕ್ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಧವನ್, ಗಾಯಗೊಂಡಿರುವ ಪಾಕ್ ಬ್ಯಾಟ್ಸಮನ್ ಶೋಯೆಬ್ ಮಲಿಕ್ ಬಗ್ಗೆ ಟ್ವೀಟ್ ಮಾಡಿದ್ದರು.

ನ್ಯೂಜಿಲೆಂಡ್ ವಿರುದ್ಧ ಹ್ಯಾಮಿಲ್ಟನ್ ನಲ್ಲಿ ನಡೆದ 4ನೇ ಪಂದ್ಯದ ವೇಳೆ ಶೋಯೆಬ್ ಮಲಿಕ್ ತಲೆಗೆ ಪೆಟ್ಟಾಗಿತ್ತು. ಈ ಬಗ್ಗೆ ತಿಳಿದ ಶಿಖರ್ ಧವನ್ ‘ ಜನಾಬ್ ಶೋಯೆಬ್ ಮಲಿಕ್, ನೀವು ಚೇತರಿಸಿಕೊಳ್ಳುತ್ತೀದ್ದೀರಿ ಹಾಗೂ ಶೀಘ್ರವೇ ಕ್ರಿಕೆಟ್ ಮೈದಾನಕ್ಕೆ ಮರಳಲಿದ್ದೀರಿ ಎಂದು ಆಶಿಸುತ್ತೇನೆ, ಟೇಕ್ ಕೇರ್ ‘ ಎಂದು ಟ್ವೀಟ್ ಮಾಡಿದ್ದರು.

ಧವನ್ ತೋರಿದ ಕಾಳಜಿ ಹಾಗೂ ಕ್ರೀಡಾಸ್ಫೂರ್ತಿಯಿಂದ ಸಂತಸಗೊಂಡ ಪಾಕ್ ಅಭಿಮಾನಿಗಳು ಟೀಮ್ ಇಂಡಿಯಾ ಆಟಗಾರನಿಗೆ ಟ್ವಿಟರಿನಲ್ಲಿ ಧನ್ಯವಾದ ಹೇಳಿದ್ದಾರೆ.

Leave a Reply

Your email address will not be published.