ಅಕ್ಷಯ್‌ ಕುಮಾರ್‌ ‘ಗೇ’ ಎಂಬ ಅನುಮಾನದಿಂದ ಮದುವೆಗೂ ಮುಂಚೆ ಅತ್ತೆ ಮಾಡಿದ್ದೇನು….?

ಬಾಲಿವುಡ್‌ ಕಿಲಾಡಿ ಅಕ್ಷಯ್‌ ಕುಮಾರ್‌ ಎಲ್ಲಾ ವಿಚಾರದಲ್ಲೂ ಕಿಲಾಡಿದೆ. ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನವನ್ನು ಬೇರೆ ಬೇರೆಯಾಗಿ ನೋಡುವ ಅಕ್ಷಯ್‌, ಪತ್ನಿ ಟ್ವಿಂಕಲ್‌  ಹಾಗೂ ಮಕ್ಕಳಿಗಾಗಿ ಹೆಚ್ಚಿನ ಸಮಯ ಮೀಸಲಿಡುತ್ತಾರಂತೆ.

ಅಕ್ಷಯ್‌ ಖಾನ್‌ ಹಾಗೂ ಟ್ವಿಂಕಲ್‌ ಜೋಡಿ ಬಾಲಿವುಡ್‌ನ ಸ್ಟಾರ್‌ ಜೋಡಿಗಳಲ್ಲೊಂದು. ಇಬ್ಬರ ಮದುವೆಯಾಗಿ 17 ವರ್ಷ ಕಳೆದಿದೆ. ಅಕ್ಷಯ್‌ ಹಾಗೂ ಟ್ವಿಂಕಲ್‌ ಅವರ 17ನೇ ವರ್ಷದ ಮದುವೆ ವಾರ್ಷಿಕೋತ್ಸವ ಕಳೆದ ಎರಡು ದಿನಗಳ ಹಿಂದಷ್ಟೇ ನಡೆದಿದೆ.

ಅಕ್ಷಯ್‌ ಕುಮಾರ್‌ ಹಾಗೂ ಟ್ವಿಂಕಲ್‌ ಮದುವೆಗೆ ಟ್ವಿಂಕಲ್‌ ತಾಯಿ ಡಿಂಪಲ್  ಒಪ್ಪಿರಲಿಲ್ಲವಂತೆ. ಅದಕ್ಕೆ ಕಾರಣ ಅಕ್ಷಯ್‌ ಕುಮಾರ್‌ ಗೇ ಎಂಬ ಅನುಮಾನ. ಹೌದು ಅಕ್ಷಯ್‌ ಕುಮಾರ್‌ ಅತ್ತೆ ಡಿಂಪಲ್ ಅಕ್ಷಯ್‌ ಅವರನ್ನು ಮೊದಲು ಗೇ ಎಂದುಕೊಂಡಿದ್ದರಂತೆ. ಆದ ಕಾರಣ ಮದುವೆಗೆ ಒಪ್ಪಿರಲಿಲ್ಲವಂತೆ. ಈ ವಿಚಾರವನ್ನು ಟ್ವಿಂಕಲ್‌ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಡಿಂಪಲ್‌ ಸ್ನೇಹಿತೆಯೊಬ್ಬರು ಅಕ್ಷಯ್‌ ಒಬ್ಬ ಸಲಿಂಗಕಾಮಿ. ನಿನ್ನ ಮಗಳನ್ನು ಆತನಿಗೆ ಕೊಡಬೇಡ ಎಂದಿದ್ದರಂತೆ. ಇದರಿಂದ ಅನುಮಾನಗೊಂಡ ಡಿಂಪಲ್‌ ಅಕ್ಷಯ್‌ಗೆ ಜೆನೆಟಿಕ್‌ ಪರೀಕ್ಷೆಯನ್ನೂ ನಡೆಸಿದ್ದರಂತೆ.

 

Leave a Reply

Your email address will not be published.