TENNIS : Australian Open : ಪ್ರೀ ಕ್ವಾರ್ಟರ್ ಹಂತಕ್ಕೆ ಬೋಪಣ್ಣ, ದಿವಿಜ್ ಶರಣ್

ಭಾರತದ ಟೆನಿಸ್ ತಾರೆಯರಾದ ರೋಹನ್ ಬೋಪಣ್ಣ ಹಾಗೂ ದಿವಿಜ್ ಶರಣ್ ಪ್ರಸಕ್ತ ನಡೆಯುತ್ತಿರುವ ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಪ್ರೀ ಕ್ವಾರ್ಟರ್ ಹಂತಕ್ಕೆ ಕಾಲಿಟ್ಟಿದ್ದಾರೆ.

ಭಾರತದ ರೋಹನ್ ಬೋಪಣ್ಣ ಹಾಗೂ ಫ್ರಾನ್ಸಿನ ರೋಜರ್ ವ್ಯಾಸಲಿನ್ ಜೋಡಿ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದ ಪ್ರೀ-ಕ್ವಾರ್ಟರ್ ಹಂತವನ್ನು ತಲುಪಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಬೋಪಣ್ಣ-ರೋಜರ್ ಜೋಡಿ, ಅರ್ಜೆಂಟೀನಾದ ಲಿಯನಾರ್ಡೊ ಮಾಯರ್ ಹಾಗೂ ಪೋರ್ಚುಗಲ್ ನ ಜೋಆಓ ಸೌಸಾ ಜೋಡಿಯನ್ನು 6-2, 7-6 (7-3) ಪಾಯಿಂಟ್ ಗಳಿಂದ ಮಣಿಸಿತು.

ಭಾರತದ ದಿವಿಜ್ ಶರಣ್ ಹಾಗೂ ರಾಜೀವ್ ರಾಮ್ ಜೋಡಿಯೂ ಸಹ ಆಸ್ಟ್ರೇಲಿಯನ್ ಓಪನ್ ಪುರುಷರ ವಿಭಾಗದ ಪ್ರೀ ಕ್ವಾರ್ಟರ್ ಹಂತಕ್ಕೆ ಅಟಿಯಿಟ್ಟಿದೆ. ದಿವಿಜ್-ರಾಜೀವ್ ಜೋಡಿಯು, ಇಟಲಿಯ ಫ್ಯಾಬಿಯೊ ಫಾಗ್ನಿನಿ ಹಾಗೂ ಸ್ಫೇನಿನ ಮಾರ್ಸೆಲ್ ಗ್ರ್ಯಾನೋಲರ್ಸ್ ಜೋಡಿಯ ವಿರುದ್ಧ  4-6, 7-6 (7-4), 6-2 ಪಾಯಿಂಟ್ ಗಳಿಂದ ಜಯಗಳಿಸಿತು.

Leave a Reply

Your email address will not be published.

Social Media Auto Publish Powered By : XYZScripts.com