ಪ್ರಭಾಸ್‌ನನ್ನು ನಾನು ಸೋದರನೆನ್ನಲು ಸಾಧ್ಯವಿಲ್ಲ ಎಂದ್ರು ಅನುಷ್ಕಾ….ಯಾಕೆ ?

ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್‌ ಬಗ್ಗೆ ಮತ್ತೆ ಗುಸು ಗುಸು ಪ್ರಾರಂಭವಾಗಿದೆ. ಬಿಲ್ಲ ಸಿನಿಮಾದಲ್ಲಿ ಇವರಿಬ್ಬರ ನಟನೆ ನೋಡಿ ಇವರಿಬ್ಬರ ಬಗ್ಗೆ ಗಾಸಿಪ್‌ ಹಬ್ಬಿತ್ತು. ಬಳಿಕ ಇಬ್ಬರೂ ಮತ್ತೆ ಮಿರ್ಚಿ ಸಿನಿಮಾದಲ್ಲಿ ನಟನೆ ಮಾಡಿ ಮತ್ತೆ ಇವರಿಬ್ಬರು ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿಗೆ ಆಹಾರವಾಗಿದ್ದರು. ಬಳಿಕ ಎಲ್ಲವೂ ಸ್ವಲ್ಪ ತಣ್ಣಗಾಗಿತ್ತು. ಬಳಿಕ ಇಬ್ಬರೂ ಮತ್ತೆ ಬಾಹುಬಲಿ ಸಿನಿಮಾದಲ್ಲಿ ಅಮೋಘ ಅಭಿನಯದ ಮೂಲಕ ಇವರಿಬ್ಬರು ಪ್ರೀತಿಸುತ್ತಿರುವುದು ಸತ್ಯ ಎಂಬ ಸುದ್ದಿ ಮತ್ತೆ ಹರಿದಾಡತೊಡಗಿದೆ. ನಾವಿಬ್ಬರು ಪ್ರೀತಿಸುತ್ತಿಲ್ಲ ಎಂದು ಇಬ್ಬರೂ ಹೇಳಿದರೂ ಅದ್ಯಾಕೋ ಯಾರು ನಂಬುತ್ತಲೇ ಇಲ್ಲ.

ಅದಕ್ಕೆ ಪುಷ್ಠಿ ನೀಡುವಂತೆ, ಸದ್ಯ ಅನುಷ್ಕಾ ಪ್ರಭಾಸ್‌ನನ್ನು ನಾನು ಸಹೋದರ ಎನ್ನಲು ಸಾಧ್ಯವಿಲ್ಲ, ನಾವಿಬ್ಬರು ಒಳ್ಳೆಯ ಸ್ನೇಹಿತರು. ನಾನು ಯಾರನ್ನೂ ಪ್ರೀತಿಸುತ್ತಿಲ್ಲ,. ನೀವೇ ನನಗೆ ಒಬ್ಬ ಒಳ್ಳೆಯ ಹುಡುಗನನ್ನು ಹುಡುಕಿಕೊಡಬಹುದು. ಮದುವೆ ಬಗ್ಗೆ ನಾನು ಯೋಚನೆ ಮಾಡುವುದನ್ನೇ ನಿಲ್ಲಿಸಿದ್ದೇನೆ. ನಮ್ಮೆಲ್ಲ ಪುರುಷ ಸ್ನೇಹಿತರನ್ನು ಸಹೋದರನೆಂದು ಕರೆಯಲು ಸಾಧ್ಯವಿಲ್ಲ ಎಂದಿದ್ದಾರೆ.

ಆದರೆ ಅವರೇನೇ ಹೇಳಿದರೂ ಅನುಷ್ಕಾ -ಪ್ರಭಾಸ್‌ ಜೋಡಿ ಆದಷ್ಟು ಬೇಗ ಮದುವೆಯಾಗಲಿ ಎಂದು ಅಭಿಮಾನಿಗಳು ರಹಸುತ್ತಿರುವುದಂತೂ ಸತ್ಯ.

 

 

Leave a Reply

Your email address will not be published.

Social Media Auto Publish Powered By : XYZScripts.com