Zee kannada : ಮುರಳಿ ನಿರೂಪಣೆಯ ಒಗ್ಗರಣೆ ಡಬ್ಬಿಗೆ 1250ರ ಸಂಭ್ರಮ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಒಗ್ಗರಣೆ ಡಬ್ಬಿ ಕಾರ್ಯಕ್ರಮ ಮಕರ ಸಂಕ್ರಾಂತಿಯಂದು 1250 ನೇ ಸಂಚಿಕೆಯ ಸಂಭ್ರಮಾಚರಣೆ ಮಾಡಿಕೊಂಡಿದ್ದು, ಕನ್ಡ ಕಿರುತೆರೆಯಲ್ಲಿ 1250 ಸಂಚಿಕೆಗಳನ್ನು ಪೂರೈಸಿರುವ ಮೊದಲ ಅಡುಗೆ ಕಾರ್ಯಕ್ರಮ ಎಂಬ ಖ್ಯಾತಿಗೆ ಭಾಜನವಾಗಿದೆ.

ಶುಶ್ರೂತ್‌ ಎಂಟರ್‌ಟೈನರ್ಸ್‌ ಬ್ಯಾನರ್‌ನಡಿ ಮುರಳಿಯವರ ನಿರೂಪಣೆಯೊಂದಿಗೆ ಸಾವಿರಾರು ವೆಜ್‌ ಹಾಗೂ ನಾನ್‌ವೆಜ್‌ ಅಡುಗೆಗಳು, ಸೌಂದರ್ಯದ ಅಡುಗೆಗಳು, ಆಯುರ್ವೇದದ ಅಡುಗೆಗಳು, ಸಾಂಪ್ರದಾಯಿಕ ಅಡುಗೆಗಳು , ವೀಕ್ಷಕರ ಮನೆ ಅಡುಗೆಗಳು ಸಹ ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಗಿದೆ.

ಈ ಸಂದರ್ಭದಲ್ಲಿ ಖ್ಯಾತ ನಟ, ನಿರ್ಮಾಪಕ ಜೈಜಗದೀಶ್‌ ಹಾಗೂ ವಿಜಯಲಕ್ಷ್ಮೀ ಸಿಂಗ್‌ ದಂಪತಿಗಉ ಒಗ್ಗರಣೆ ಡಬ್ಬಿ ಭಾಗ 6 ಬ್ರೇಕ್‌ಫಾಸ್ಟ್‌ ರೆಸಿಪಿ ಪುಸ್ತಕ ಬಿಡುಗಡೆ ಮಾಡಿ ಕಾರ್ಯಕ್ರಮದಲ್ಲಿ ರುಚಿಕರವಾದ ಅಡುಗೆ ಮಾಡಿದರು.

ಇನ್ನು ಈ ಸುಸಂದರ್ಭದಲ್ಲಿ ಟಿವಿ 9ನ ಖ್ಯಾತ ನಿರೂಪಕ ರಂಗನಾಥ್ ಭಾರದ್ವಾಜ್‌ ಹಾಗೂ ರಾಧಿಕಾ ದಂಪತಿ ಕೇಕ್‌ ಕತ್ತರಿಸಿ ಅಡುಗೆಯೊಂದನ್ನು ತೋರಿಸಿಕೊಟ್ಟಿದ್ದಾರೆ. ಇಷ್ಟಲ್ಲದೆ ಕಿರುತೆರೆಯ ನಟಿ, ನಿರ್ಮಾಪಕಿ, ನಿರ್ದೇಶಕಿ ಶ್ರುತಿ ನಾಯ್ಡುರವರು ಸಾಂಪ್ರದಾಯಕ ಅಡುಗೆ ಮಾಡಿ ಸಂಕ್ರಾಂತಿಯ ಸೊಬಗನ್ನು ಹೆಚ್ಚಿಸಿದರು.

ಅದ್ದೂರಿಯಾದ 1250ನೇ ಸಂಚಿಕೆಯ ಸಂಭ್ರಮಾಚರಣೆ ಜನವರಿ 15 ರಿಂದ 19ರ ವರೆಗೆ ಪ್ರಸಾರವಾಗಲಿದೆ. ಬ್ರೇಕ್‍ಫಾಸ್ಟ್ ರೆಸಿಪಿಗಳನ್ನೊಳಗೊಂಡ ಒಗ್ಗರಣೆ ಡಬ್ಬಿ ಭಾಗ-6 ಪುಸ್ತಕವು ಪ್ರಪಂಚಾದ್ಯಂತ ಜನವರಿ 16ರಿಂದ ನಿಮ್ಮ ಕೈ ಸೇರಲಿದೆ.

 

Leave a Reply

Your email address will not be published.

Social Media Auto Publish Powered By : XYZScripts.com