ರಾಮ ಮಂದಿರ ನಿರ್ಮಾಣ ಬೆಂಬಲಿಸಿದ್ದಕ್ಕೆ ಮುಸ್ಲಿಂ ಮಹಿಳೆ ಮನೆಗೆ ಬೆಂಕಿ ಇಟ್ಟ ದುಷ್ಕರ್ಮಿಗಳು

ಲಖನೌ : ಉತ್ತರ ಪ್ರದೇಶದ ಹಾಪುರ್‌ನಲ್ಲಿ ರಾಮಮಂದಿರ ನಿರ್ಮಾಣಕ್ಕೆ ಬೆಂಬಲ ವ್ಯಕ್ತಪಡಿಸಿದರು ಎಂಬ ಕಾರಣಕ್ಕೆ ಮುಸ್ಲಿಂ ಮಹಿಳೆಯೊಬ್ಬರ ಮನೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ನಡೆದಿದೆ.

ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ರಾಮಮಂದಿರ ನಿರ್ಮಾಣದ ಕೂಗು ಹೆಚ್ಚಾಗಿದೆ. ಅಲ್ಲದೆ ನಮ್ಮ ಆಡಳಿತದಲ್ಲಿ ರಾಮಮಂದಿರ ನಿರ್ಮಾಣ ಮಾಡಿಯೇ ಸಿದ್ದ ಎಂದು ಎಲ್ಲೆಲ್ಲೂ ಹಿಂದೂಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಈ ಮಧ್ಯೆ ಇಕ್ರಾಮ ಚೌಧರಿ ಮುಸ್ಲಿಂ ಮಹಿಳಾ ಸಂಘಟನೆಯ ಮುಖ್ಯಸ್ಥೆ ರಾಮ ಮಂದಿರ ನಿರ್ಮಾಣಕ್ಕೆ ಬೆಬಲ ವ್ಯಕ್ತಪಡಿಸಿದ್ದರು.

ಈ  ಸಂಬಂಧ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಮೆಮೊರಂಡಂ ಸಹ ಸಲ್ಲಿಸಿದ್ದರು. ಆಗನಿಂದಲೂ ರಾಮ ಮಂದಿರ ವಿಚಾರದಲ್ಲಿ ತಲೆ ಹಾಕದಂತೆ ಆಕೆಗೆ ಬೆದರಿಕೆ ಕರೆ ಬರುತ್ತಲೇ ಇದ್ದವು. ಆದರೆ ಇದಕ್ಕೆ ಜಗ್ಗದ ಆಕೆ ರಾಮಮಂದಿರಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಆಕೆಯ ಮನೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು, ಈಗ ನಿನ್ನ ರಾಮನನ್ನು ಕರೆ ಎಂದು ಬರೆದಿಟ್ಟು ಪರಾರಿಯಾಗಿದ್ದಾರೆಯ

ಈ ಬಗ್ಗೆ ಇಕ್ರಾ, ಪೊಲೀಸರಿಗೆ ದೂರು ನೀಡಿದ್ದು, ಇದುವರೆಗೂ ಆರೋಪಿಗಳು ಪತ್ತೆಯಾಗಿಲ್ಲ.

 

Leave a Reply

Your email address will not be published.