ಸ್ನೇಹಿತೆಯನ್ನು ಕೊಂದವಳು Selfie ಯಿಂದ ಪೋಲೀಸರ ಅತಿಥಿಯಾಗಿದ್ದು ಹೇಗೆ..?

ಅಪರಾಧಿ ತಾನು ಎಷ್ಟೇ ಜಾಣತನ ತೋರಿದರೂ, ಎಷ್ಟೇ ಎಚ್ಚರಿಕೆ ವಹಿಸಿದರೂ, ಘಟನಾ ಸ್ಥಳದಲ್ಲಿ ಒಂದಲ್ಲ ಒಂದು ಸುಳಿವನ್ನು ಬಿಟ್ಟೇ ಇರುತ್ತಾರೆ ಎಂಬುದು ಪ್ರಸಿದ್ಧ ಮಾತು. ಈ ಮಾತು ನಿಜವೆಂಬುದು ಮತ್ತೊಮ್ಮೆ ಸಾಬೀತಾಗಿದೆ.

ಸ್ನೇಹಿತೆಯನ್ನು ಕೊಂದಿರುವ ಆರೋಪದ ಮೇಲೆ ರೋಸ್ ಆ್ಯಂಟಾಯಿನ್ ಹೆಸರಿನ ಯುವತಿಯೊಬ್ಬಳಿಗೆ ಕೆನಡಾ ರಾಜಧಾನಿ ಒಟ್ಟಾವಾದ ಸ್ಥಳೀಯ ನ್ಯಾಯಾಲಯ 7 ವರ್ಷ ಜೈಲುಶಿಕ್ಷೆ ವಿಧಿಸಿದೆ. ರೋಸ್ ಆ್ಯಂಟಾಯಿನ್ ತನ್ನ ಸ್ನೇಹಿತೆಯಾಗಿದ್ದ ಬ್ರಿಟ್ನೀ ಗ್ಯಾರ್ಗೋಲ್ ಳನ್ನು ಎರಡು ವರ್ಷಗಳ ಹಿಂದೆ ಕುತ್ತಿಗೆಗೆ ಚೈನ್ ಬಿಗಿದು ಕೊಲೆಮಾಡಿದ್ದಳು. ಘಟನೆಯ ನಂತರ ಆ ಚೈನನ್ನು ಅಲ್ಲಿಯೇ ಬಿಟ್ಟಿದ್ದಳು.

ಇತ್ತೀಚೆಗೆ ರೋಸ್ ಆ್ಯಂಟಾಯಿನ್, ಗೆಳತಿ ಬ್ರಿಟ್ನೀ ಗ್ಯಾರ್ಗೋಲ್ ಜೊತೆಗಿನ ಹಳೆಯ ಸೆಲ್ಫಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಳು. ಈ ಸೆಲ್ಫೀ ಕೊಲೆ ನಡೆಯುವ ಕೆಲವೇ ಹೊತ್ತಿನ ಮೊದಲು ತೆಗೆಯಲಾಗಿದ್ದು, ಇದರಲ್ಲಿ ರೋಸ್ ತನ್ನ ಸ್ನೇಹಿತೆಯನ್ನು ಕೊಲೆಗೈಯಲು ಬಳಸಿದ್ದ ಚೈನ್ ಧರಿಸಿದ್ದಾಳೆ. ಇದನ್ನು ಗಮನಿಸಿದ ಪೋಲೀಸರು ತನಿಖೆ ನಡೆಸಿದಾಗ ನಿಜ ವಿಷಯ ಬಯಲಾಗಿದೆ.

Image result for selfie murder gargol

Image result for selfie murder gargol

ನ್ಯಾಯಾಲಯದಲ್ಲಿ ತನ್ನ ತಪ್ಪನ್ನು ಒಪ್ಪಿಕೊಂಡಿರುವ ರೋಸ್ ‘ ಕೊಲೆ ನಡೆದ ರಾತ್ರಿ ನಾವಿಬ್ಬರೂ ನಶೆಯಲ್ಲಿದ್ದೆವು, ನಮ್ಮಿಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ಹೋಯಿತು. ಅರಿವಿಲ್ಲದೇ ನಾನು ಆಕೆಯ ಕೊಲೆ ಮಾಡಿದ್ದೇನೆ ‘ ಎಂದು ಹೇಳಿದ್ದಾಳೆ.

Leave a Reply

Your email address will not be published.