ದಲಿತ ಮಹಿಳೆ ಮೇಲೆ ಅತ್ಯಾಚಾರವೆಸಗಿದ SBI ಬ್ಯಾಂಕ್‌ ಮ್ಯಾನೇಜರ್‌ : ಆಮೇಲಾಗಿದ್ದೇನು ?

ರಾಯಚೂರು : ದಲಿತ ಮಹಿಳೆಯೊಬ್ಬರ ಮೇಲೆ ಬ್ಯಾಂಕ್‌ ಮ್ಯಾನೇಜರ್‌ ಒಬ್ಬ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿ ನಡೆದಿದೆ.

ಬಂಧಿತ ಬ್ಯಾಂಕ್‌ ಮ್ಯಾನೇಜರ್‌ನನ್ನು ಮಹೇಶ್‌ ಎಂದು ಗುರುತಿಸಲಾಗಿದೆ. ಮನೆಯಲ್ಲಿ ಕೆಲಸಕ್ಕಿದ್ದ ವಿವಾಹಿತೆಯನ್ನು ಮದುವೆಯಾಗುವುದಾಗಿ ನಂಬಿಕೆ ಕಳೆದ 5 ತಿಂಗಳಿನಿಂ ಅತ್ಯಾಚಾರವೆಸಗುತ್ತಿದ್ದ. ಬಳಿಕ ಮದುವೆಯಾಗುವಂತೆ ಒತ್ತಾಯಿಸಿದಾಗ ಅದಕ್ಕೆ ನಿರಾಕರಿಸಿ ಜೀವಬೆದರಿಕೆ ಹಾಕಿದ್ದಲ್ಲದೆ ಮನೆಯಿಂದ  ಹೊರಹಾಕಿದ್ದ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ಸಂಬಂಧ ಸಿಂಧನೂರು ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com