ಕಮ್ಯುನಿಸ್ಟ್‌ ಜೊತೆಗಾರನ ಅಗಲಿಕೆಯ ಆಘಾತ : CPI ಮುಖಂಡ ವಿಶ್ವನಾಥ್‌ ನಾಯಕ್ ನಿಧನ

ಮಂಗಳೂರು : ಕಮ್ಯುನಿಸ್ಟ್‌ ಚಳುವಳಿಯ ಜೊತೆಗಾರ, ದಶಕಗಳಿಂದ ಸ್ನೇಹಿತರಾಗಿ ಚಳುವಳಿಯಲ್ಲಿ ಒಟ್ಟಾಗಿ ಕೆಲಸ ಮಾಡಿದ್ದ ಮಖಂಡರಿಬ್ಬರು ಒಂದೇ ದಿನ ನಿಧನರಾಗಿದ್ದಾರೆ.

ಬುಧವಾರ ಬೆಳಗ್ಗೆ ಧೀರ್ಘಕಾಲದ ಅನಾರೋಗ್ಯದಿಂದ ಹಿರಿಯ ಸಿಪಿಐ ಮುಖಂಡ ಪಿ. ಸಂಜೀವ್‌ ನಿಧನರಾಗಿದ್ದರು. ಅವರೊಂದಿಗೆ ದಶಕಗಳ ಕಾಲ ಕಾರ್ಮಿಕ ಚಳುವಳಿಯಲ್ಲಿ ಭಾಗವಹಿಸಿದ್ದ ವಿಶ್ವನಾಥ್‌ ನಾಯಕ್‌ ಅವರು ರಾತ್ರಿ ಹೃದಯಾಘಾತಕ್ಕೀಡಾಗಿದ್ದಾರೆ.

ವಿಶ್ವನಾಥ್‌ ನಾಯಕ್‌ ಅವರೂ ಭೂ ಸುಧಾರಣೆ ಹೋರಾಟದ ನೇತೃತ್ವ ವಹಿಸಿ ಜೈಲುವಾಸ ಅನುಭವಿಸಿದ್ದರು. ಅದೇ ಕಾರಣಕ್ಕೆ ಭೂ ಮಾಲೀಕರಿಂದ ಹಲ್ಲೆಗೊಳಗಾಗಿದ್ದರು. ಬಂಟ್ವಾಳ ಪುರಸಭೆಯಲ್ಲಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.

ಬೀಡಿ, ರೈತ, ಕಾರ್ಮಿಕ ಚಳುವಳಿಯ ನೇತೃತ್ವ ವಹಿಸಿದ್ದ ವಿಶ್ವನಾಥ್‌ ನಾಯಕ್‌ ಅವರು ಸಿಪಿಐ ರಾಜ್ಯ ಮಂಡಳಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಪಿ. ಸಂಜೀವ ಅವರು ಸಿಪಿಐ  ಜಿಲ್ಲಾ ಕಾರ್ಯದರ್ಶಿಯಾಗಿ ಬೀಡಿ ಕಾರ್ಮಿಕ ಚಳುವಳಿಯಲ್ಲಿ ಸೇವೆ ಸಲ್ಲಿಸಿದ್ದರು.

ಒಟ್ಟಿನಲ್ಲಿ ದಶಕಗಳ ಕಾಲ ಕಮ್ಯುನಿಸ್ಟ್ ಚಳುವಳಿಯಲ್ಲಿ ಒಟ್ಟಾಗಿದ್ದ ಇಬ್ಬರು ಜೊತೆಗಾರರು ಒಂದೇ ದಿನ ನಿಧನರಾಗಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com