Maharashtra : ಮದರಸಾದಲ್ಲಿ ವಿಷಾಹಾರ ಸೇವಿಸಿ 30 ಮಕ್ಕಳು ಅಸ್ವಸ್ಥ

ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಭೀವಂಡಿಯ ಮದರಸಾ ಒಂದರಲ್ಲಿ ವಿಷಾಹಾರ ಸೇವಿಸಿದ ಪರಿಣಾಮ 30 ಮಕ್ಕಳು ಅಸ್ವಸ್ಥಗೊಂಡ ಘಟನೆ ನಡೆದಿದೆ. ಗುರುವಾರ ನಡೆದ ಸಮಾರಂಭವೊಂದರ ಮುಕ್ತಾಯದ ನಂತರ ಆಹಾರ ಸೇವಿಸಿದ ಮಕ್ಕಳು ಅಸ್ವಸ್ಥಗೊಂಡಿದ್ದಾರೆ.

ಸ್ಥಳೀಯ ವ್ಯಕ್ತಿಯೊಬ್ಬರು ಮದರಸಾದಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದರು. ನಂತರ ನಡೆದ ಭೋಜನಕೂಟದಲ್ಲಿ ಊಟ ಮಾಡಿದ ಮಕ್ಕಳು ಹೊಟ್ಟೆ ನೋವು, ವಾಕರಿಕೆ, ಸುಸ್ತಿನಿಂದ ಬಳಲಿದ್ದಾರೆ. ಕೆಲವು ಮಕ್ಕಳು ವಾಂತಿ ಮಾಡಿಕೊಂಡಿದ್ದಾರೆ.

ಅಸ್ವಸ್ಥಗೊಂಡ ಮಕ್ಕಳೆಲ್ಲ 12 ರಿಂದ 15 ವರ್ಷದೊಳಗಿನವರಾಗಿದ್ದು, ಘಟನೆಯ ಬಳಿಕ ಕೂಡಲೇ ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಭಿವಂಡಿಯ ತಹಶೀಲ್ದಾರರಾದ ಶಶಿಕಾಂತ ಗಾಯಕ್ವಾಡ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆಯ ಬಗ್ಗೆ ತನಿಖೆ ಜಾರಿಯಲ್ಲಿದೆ ಎಂದು ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com