ಹೈ. ಕರ್ನಾಟಕ ಭಾಗದ ರಾಜಕಾರಣಿಗಳು ನಾಲಾಯಕ್‌ಗಳು : ಖರ್ಗೆ ವಿರುದ್ದ ಸಚಿವ ಹೆಗಡೆ ಕಿಡಿ

ಯಾದಗಿರಿ : ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ಭವಿಷ್ಯದ ಅಭಿವೃದ್ಧಿ ಕುರಿತಂತೆ ನಾಯಕರಿಗೆ ದೂರದೃಷ್ಠಿ ಇಲ್ಲ. ಯೋಜನೆಗಳನ್ನು ಜಾರಿಗೆ ತರುವಲ್ಲಿ ರಾಜಕೀಯ ನಾಯಕರು ವಿಫಲವಾಗಿದ್ದಾರೆ.  ಇಂತಹವರು ರಾಜಕಾರಣಿಯಾಗಲು ನಾಲಾಯಕ್‌ ಎಂದು ಸಚಿವ ಅನಂತ್‌ ಕುಮಾರ್‌ ಹೆಗಡೆ ಟೀಕೆ ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌ ಮುಖಂಡ ಮಲ್ಲಿಕಾರ್ಜುನ್‌ ಖರ್ಗೆ, ಪ್ರತಿಯೊಂದನ್ನು ಹೆಗಡೆಯವರು ತಪ್ಪಾಗಿ ಅರ್ಥೈಸಿಕೊಂಡು ಕೆಟ್ಟದಾಗಿ ಮಾತನಾಡುತ್ತಾರೆ. ಎಲ್ಲವನ್ನು ಸ್ಪಲ್ಪ ತಿಳಿದುಕೊಂಡು ಮಾತನಾಡಿ ಎಂದಿದ್ದಾರೆ.

ಕಲಬುರಗಿಯಲ್ಲಿ ನಡೆಯುತ್ತಿರುವ ಉದ್ಯೋಗ ಮೇಳ ಕಾರ್ಯಕ್ರಮದ ವೇಳೆ ಈ ಹೇಳಿಕೆ ನೀಡಿದ್ದಾರೆ. ಲಕ್ಷಾಂತರ ಮಂದಿ ಉದ್ಯೋಗಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಅಂತಹವರ ಬದುಕಿಗೆ ಕಾಯಕಲ್ಪ ನೀಡುವ ದೂರದೃಷ್ಠಿಯನ್ನು ನಾಯಕ ಹೊಂದಿರಬೇಕು. ಆದರೆ ಹೈ. ಕಭಾಗದಲ್ಲಿ ಯಾವುದೇ ಅಭಿವೃದ್ದಿ ಕೆಲಸ ನಡೆದಿಲ್ಲ ಎಂದಿದ್ದಾರೆ.

ರಾಜಕೀಯ ಕುರ್ಚಿ ಇರುವುದು ಮಜಾ ಮಾಡಲು, ತಮಾಷೆ ಮಾಡಲು ಅಲ್ಲ. ಅದು ಜವಾಬ್ದಾರಿಯ ಕುರ್ಚಿಯಾಗಿದೆ. ನಮ್ಮನ್ನು ನಂಬಿರುವ ಜನ ಮತ ಹಾಕಿದ್ದು. ಅವರಿಗೆ ನಾವು ಬದುಕು ಕಟ್ಟಿಕೊಡಬೇಕು. ಇಂತಹ ಕೆಲಸ ಮಾಡದ ರಾಜಕೀಯಕ್ಕೆ ನಮ್ಮ ಧಿಕ್ಕಾರವಿದೆ ಎಂದಿದ್ದಾರೆ.

ಹೈದರಾಬಾದ್‌ ಕರ್ನಾಟಕ ಒಣ ಪ್ರದೇಶ. ಇಲ್ಲಿ ವ್ಯವಸಾಯ ಮಾಡುವುದ ಬಹಳ ಕಷ್ಟ. ಅಭಿವೃದ್ಧಿಗೂ ಇಲ್ಲಿ ಅವಕಾಶವಿಲ್ಲ. ಆದರೂ ಜನ ಕಷ್ಟಪಡುತ್ತಾರೆ ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯಿಂದ ಅಭಿವೃದ್ದಿಯಾಗಿಲ್ಲ ಎಂದು ದೂರಿದ್ದಾರೆ. ಹೈ ಕ, ಇಷ್ಟು ಹಿಂದುಳಿದಿದೆ ಎಂದು ತಿಳಿದಿದ್ದರೆ ನೂರಾರು ಕಂಪನಿಗಳನ್ನು ಕರೆದುಕೊಂಡು ಬರುತ್ತಿದ್ದೆ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com