ಇನ್ಮುಂದೆ ನೀವು ನೆಟ್‌ ಇಲ್ಲದೆಯೂ ಚಾಟ್‌ ಮಾಡಬಹುದು….ಅದ್ಹೇಗೆ… ಇಲ್ಲಿದೆ ಡಿಟೇಲ್ಸ್‌

ಸ್ವದೇಶಿ ಮೆಸೇಜಿಂಗ್‌ ಆ್ಯಪ್‌ ಹೈಕ್‌, ಗ್ರಾಹಕರಿಗೆ ಸಂತಸದ ಸುದ್ದಿ ನೀಡಿದೆ.  ಗ್ರಾಹಕರಿಗಾಗಿ ಹೊಸ ಸೇವೆಯೊಂದನ್ನು ಶುರು ಮಾಡಿದ್ದು,  ಆ್ಯಂಡ್ರಾಯ್ಡ್‌ ಬಳಕೆದಾರರು ಇಂಟರ್‌ನೆಟ್‌ ಡೇಟಾ ಇಲ್ಲದೆ ಸಂದೇಶ ಕಳುಹಿಸಬಹುದಾಗಿದೆ. ಜೊತೆಗೆ ಇದರಲ್ಲಿ ಸುದ್ದಿ ಓದುವ, ರೈಲ್ವೇ ಟಿಕೆಟ್‌ ಬುಕ್‌ ಮಾಡುವ, ಹಣ ವರ್ಗಾವಣೆ ಮಾಡುವ ಅವಕಾಶವನ್ನು ಸಹ ನೀಡುತ್ತಿದೆ.

ವಾಟ್ಸ್‌ ಆಪ್‌ಗೆ ಟಕ್ಕರ್‌ ನೀಡುವ ಸಲುವಾಗಿ ಈ ಸೇವೆಯನ್ನು ಹೈಕ್‌ ಶುರುಮಾಡಿದ್ದು, ಇಂಟರ್ನೆಟ್‌ ಇಲ್ಲದೆ 10 ಕೋಟಿ ಗ್ರಾಹಕರನ್ನು ತಲುಪಲು ಏರ್ಟೆಲ್‌, ವೊಡಾಫೋನ್‌ ಹಾಗೂ ಬಿಎಸ್‌ಎನ್‌ಎಲ್‌ ನಂತಹ ದೂರ ಸಂಪರ್ಕ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿದೆ.

ಇಂಟೆಕ್ಸ್‌ ಹಾಗೂ ಕಾರ್ಬನ್‌ ಗ್ರಾಹಕರಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ. ಅಲ್ಲದೆ ಈ ಫೋನ್‌ನಲ್ಲಿ ಹೈಕ್‌ಗೆ ಲಾಗಿನ್‌ ಆಗುವ ಗ್ರಾಹಕರಿಗೆ 200 ರೂ ಕ್ಯಾಶ್‌ ಬ್ಯಾಕನ್ನು ಸಹ ನೀಡಲಿದೆ.

Leave a Reply

Your email address will not be published.

Social Media Auto Publish Powered By : XYZScripts.com