ವಿಧಾನಸಭಾ ಚುನಾವಣೆಗೆ ದಿನಾಂಕ ಫಿಕ್ಸ್‌ : ಕೇಂದ್ರ ಚುನಾವಣಾ ಆಯುಕ್ತರಿಂದ ಘೋಷಣೆ

ದೆಹಲಿ : ಈಶಾನ್ಯ ಭಾರತದ ಮೇಘಾಲಯ, ನಾಗಾಲ್ಯಾಂಡ್‌ ಹಾಗೂ ತ್ರಿಪುರ ರಾಜ್ಯಗಳ ವಿಧಾನಸಭಾ ಚುನಾವಣೆಗೆ ದಿನಾಂಕ ಫಿಕ್ಸ್ ಆಗಿದೆ. ಇದೇ ಫೆಬ್ರವರಿ 18 ಹಾಗೂ ಫೆ. 27ರಂದು ಚುನಾವಣೆ ನಡೆಯಲಿದೆ ಎಂದು ಮುಖ್ಯಚುನಾವಣಾ ಆಯುಕ್ತ ಎ.ಕೆ ಜ್ಯೋತಿ ತಿಳಿಸಿದ್ದಾರೆ.

ಫೆಬ್ರವರಿ 18 ಹಾಗೂ 27ರಂದು  ಒಂದೇ ಹಂತದ ಮತದಾನ ನಡೆಯಲಿದೆ. ಮಾರ್ಚ್‌ 3ರಂದು ಎಣಿಕೆ ಕಾರ್ಯ ನಡೆದು ಫಲಿತಾಂಶ ಹೊರಬೀಳಲಿದೆ. ತ್ರಿಪುರದಲ್ಲಿ ಫೆಬ್ರವ ರಿ 18ರಂದು ನಾಗಾಲ್ಯಾಂಡ್‌ ಹಾಗೂ ಮೇಘಾಲಯದಲ್ಲಿ ಫೆ.27ರಂದು ಚುನಾವಣೆ ನಡೆಯಲಿದೆ ಈ ಮೂರು ರಾಜ್ಯಗಳ ಮತ ಎಣಿಕೆ ಮಾರ್ಚ್‌ 3ರಂದು ನಡೆಯಲಿದ್ದು, ಇಂದಿನಿಂದಲೇ 3ರಾಜ್ಯಗಳಲ್ಲೂ ನೀತಿ ಸಂಹಿತೆ ಜಾರಿಗೆ ಬರಲಿದೆ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com