ದೇಶದ ಗಡಿ ರಕ್ಷಣೆ ವಿಚಾರದಲ್ಲಿ ಮೋದಿ, ಸುಷ್ಮಾ ಸ್ವರಾಜ್‌ ಆಟವಾಡ್ತಿದ್ದಾರೆ : ಕಾಂಗ್ರೆಸ್‌

ದೆಹಲಿ : ಚೀನಾ ಸೇನೆ ಡೋಕ್ಲಾಂ ವಿಚಾರವಾಗಿ ಮತ್ತೆ ಕ್ಯಾತೆ ತೆಗೆದಿದ್ದು, ಗಡಿಯಲ್ಲಿ ಮತ್ತೆ ಸೇನೆಯನ್ನು ನಿಯೋಜಿಸಿದೆ. ಈ ವಿಚಾರ ಸಂಬಂಧ ಕೇಂದ್ರ ಸರ್ಕಾರದ ವಿರುದ್ದ ಕಾಂಗ್ರೆಸ್‌ ವಾಗ್ದಾಳಿ ನಡೆಸಿದ್ದು, ಪ್ರಧಾನಿ ಮೋದಿ ಹಾಗೂ ಸಚಿವೆ ಸುಷ್ಮಾ ಸ್ವರಾಜ್‌ ದೇಶದ ವಿಚಾರವಾಗಿ ಆಟವಾಡುತ್ತಿದ್ದಾರೆ ಎಂದು ಆರೋಪ ಹೊರಿಸಿದೆ.

ಉಪಗ್ರಹಗಳು ಗಡಿಯಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ಫೋಟೋ ಹಾಗೂ ಮಾಧ್ಯಮಗಳ ವರದಿ ಪ್ರಕಾರ ಡೋಕ್ಲಾಂ ಪ್ರದೇಶದಲ್ಲಿ ಚೀನಾ ತನ್ನ ಸೇನೆಯನ್ನು ನಿಯೋಜಿಸಿದೆ. ಆದರೂ ಕೇಂದ್ರ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ಡೋಕ್ಲಾಂ ಪ್ರದೇಶವನ್ನು ವಶಪಡಿಸಿಕೊಂಡು ತನ್ನ ಸಾಮರ್ಥ್ಯ ತೋರಿಸುವ ಪ್ರಯತ್ನ ನಡೆಸುತ್ತಿದೆ. ಆದರೆ ನಮ್ಮ ಗಡಿ ರಕ್ಷಣೆ ಮಾಡವಲ್ಲಿ ಮೋದಿ ವಿಫಲರಾಗಿರುವುದಾಗಿ ಕಾಂಗ್ರೆಸ್‌ ವಕ್ತಾರ ರಣದೀಪ್‌ ಸಿಂಗ್ ಸುರ್ಜೇವಾಲಾ ಆರೋಪಿಸಿದ್ದಾರೆ.

Leave a Reply

Your email address will not be published.