ಜಾಸ್ತಿ ಮಾತಾಡಿದ್ರೆ ಪೆಟ್ಟು ತಿಂತೀಯಾ : ಜಾನುವಾರು ಸಾಗಿಸುತ್ತಿದ್ದವರಿಗೆ ಪ್ರತಾಪ್ ಸಿಂಹ ಆವಾಜ್‌

ಚಿತ್ರದುರ್ಗ: ಜಾನುವಾರು ಸಾಗಿಸುತ್ತಿದ್ದ ವಾಹನವನ್ನು ತಡೆದು ಸಂಸದ ಪ್ರತಾಪ್‌ ಸಿಂಹ ಆವಾಜ್‌ ಹಾಕಿದ ಘಟನೆ ಚಿತ್ರದುರ್ಗದ ಗಿಡ್ಡೋಬನಹಳ್ಳಿ ಬಳಿ ನಿನ್ನೆ ರಾತ್ರಿ ನಡೆದಿದೆ. ಪ್ರತಾಪ್ ಸಿಂಹ ಕುಷ್ಟಗಿಯಿಂದ ತೆರಳುತ್ತಿದ್ದರು. ಈ ವೇಳೆ ಕ್ಯಾಂಟರ್‌ನಲ್ಲಿ ಜಾನುವಾರುಗಳನ್ನು ಸಾಗಣೆ ಮಾಡಲಾಗುತ್ತಿತ್ತು. ಕೂಡಲೆ ವಾಹನವನ್ನು ಅಡ್ಡಗಟ್ಟಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಪ್ರತಾಪ್ ಸಿಂಹ ಬೆಂಬಲಿಗರಿಂದ ಅವಾಚ್ಯ ಶಬ್ದ ಬಳಕೆ ಮಾಡಿದ್ದು, ನೀನು ಹಿಂದು ನ, ನೀನು ಹಿಂದು ನಾ…… ಎಂದು ನಿಂದಿಸಿದ್ದಾರೆ.

ಇದೇ ವೇಳೆ ಮಾತಿಗೆ ಮಾತು ಬೆಳೆದು ಪ್ರತಾಪ್‌ ಸಿಂಹ ಬೆಂಬಲಿಗರು ವಾಹನ ಸವಾರರ ಮೇಲೆ ಹಲ್ಲೆ ಮಾಡಿದ್ದಾರೆ.ಈ ವೇಳೆ 12 ಎತ್ತು, 3 ಎಮ್ಮೆಗಳು ಹಾಗೂ ನಾಗಮಂಗಲ ಮೂಲದ ಮಂಜುನಾಥ್, ಕೆಂಚಪ್ಪ ಮಂಜೇಗೌಡ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜಾನುವಾರುಗಳನ್ನು ಖಾನಾಹೊಸಹಳ್ಳಿಯಿಂದ ಬೆಂಗಳೂರಿಗೆ ಸಾಗಿಸಲಾಗುತ್ತಿತ್ತು. ಘಟನೆಯ ಕುರಿತು ಪ್ರತಾಪ್ ಸಿಂಹ ಫೇಸ್‌ಬುಕ್‌ ಲೈವ್‌ ನೀಡಿದ್ದು,  ಇದರಲ್ಲಿ, ಜಾಸ್ತಿ ಮಾತಾಡಿದರೆ ಪೆಟ್ಟು ತಿಂತೀಯಾ ಎಂದು ಆವಾಜ್ ಹಾಕಿರುವ ಧ್ವನಿ ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com