Belagavi : ಕರ್ಪೂರವಿಟ್ಟು ಕಾರಿಗೆ ಬೆಂಕಿ ಹಚ್ಚುತ್ತಿದ್ದ ಸೈಕೋ ಡಾಕ್ಟರ್‌ ಅರೆಸ್ಟ್‌

ಬೆಳಗಾವಿ : ಕಲಬುರಗಿ ಸುತ್ತಮುತ್ತಲ ಪ್ರದೇಶಲ್ಲಿ ಕಾರುಗಳಿಗೆ ಬೆಂಕಿ ಹಚ್ಚುತ್ತಿದ್ದ ಸೈಕೋನನ್ನು ಪೊಲೀಸರು ಬಂಧಿಸಿದ್ದಾರೆ.ಆರೋಪಿಯನ್ನು ಡಾ. ಅಮಿತ್ ಗಾಯಕವಾಡ್‌ ಎಂದು ಗುರುತಿಸಲಾಗಿದ್ದು. ಈತ ಬೆಳಗಾವಿಯ ಬಿಐಎಂಎಸ್‌ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದ.

ಕಳೆದ 1 ವಾರದಿಂದ ನಗರದ ಕಾರುಗಳ ಮೇಲೆ ಕರ್ಪೂರವನ್ನಿಟ್ಟು ಬೆಂಕಿ ಹಚ್ಚುತ್ತಿದ್ದ. ಇದೇ ರೀತಿ ಕಲಬುರಗಿಯ ಖುಬಾ ಫ್ಲಟ್‌ನಲ್ಲಿ ಕಾರಿಗೆ ಬೆಂಕಿ ಹಚ್ಚುವ ವೇಳೆ ಕಾರ್‌ ಮಾಲೀಕರು ಆರೋಪಿಯನ್ನು ಗಮನಿಸಿದ್ದರು. ಅನುಮಾನ ಬಂದು ಆತನನ್ನು ಪ್ರಶ್ನಿಸಿದಾಗ ನಾನು ಮನೆಯ ಮಾಲೀಕ ಡಿಸೋಜಾ ಅವರನ್ನು ನೋಡಲು ಬಂದಿದ್ದಾಗಿ ಹೇಳಿದ್ದ. ಆದರೆ ಡಿಸೋಜಾ ಸತ್ತು ಅನೇಕ ದಿನಗಳಾಗಿದ್ದವು. ಬಳಿಕ ಹೆಲ್ಮೆಟ್ ತೆಗೆಸಿ ವಿಚಾರಿಸಿದಾಗ ಆತ ಎಸ್ಕೇಪ್‌ ಆಗಿದ್ದ. ಘಟನೆ ಕುರಿತು ಕಾರು ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಈ ಮಾಹಿತಿಯನ್ನಾಧರಿಸಿ ಆರೋಪಿಯನ್ನು ಪೊಲೀಸರು ಪತ್ತೆ ಹಚ್ಚುವಲ್ಲಿ ಪೊಲೀಸರು ಸಫಲರಾಗಿದ್ದು, ಕಲಬುರಗಿಯ ಜನ ನಿರಾಳರಾಗಿದ್ದಾರೆ.

 

 

Leave a Reply

Your email address will not be published.

Social Media Auto Publish Powered By : XYZScripts.com